ಕರ್ನಾಟಕ

karnataka

ETV Bharat / state

ಸಾವಿಗೀಡಾದ ಮಂಗ: ಧಾರ್ಮಿಕ ವಿಧಿವಿಧಾನ ನೆರವೇರಿಸಿದ ಗ್ರಾಮಸ್ಥರು - ಮಂಗನ ಸಾವಿಗೆ ಧಾರ್ಮಿಕ ವಿಧಿವಿಧಾನ ನೆರವೇರಿಸಿದ ಗ್ರಾಮಸ್ಥರು

ಇತ್ತೀಚೆಗೆ ಯರೇಹಳ್ಳಿ ಗ್ರಾಮಕ್ಕೆ ಬಂದಿದ್ದ ಕೋತಿ ಗ್ರಾಮಸ್ಥರ ಜೊತೆ ಅವಿನಾಭಾವ ಸಂಬಂಧ ಹೊಂದಿತ್ತು ಎನ್ನಲಾಗಿದೆ. ಇದ್ದಕ್ಕಿದ್ದಂತೆ ಮೇ 13 ರಂದು ಈ ಕೋತಿ ಅಕಾಲಿಕ ಮರಣ ಹೊಂದಿದೆ. ಇದರಿಂದ ನೊಂದ ಗ್ರಾಮಸ್ಥರು ಪ್ಲೆಕ್ಸ್​ ಹಾಕಿ ಅದಕ್ಕೆ ಗೌರವ ಸೂಚಿಸಿದ್ದಾರೆ. ನಂತರ ಮರಣ ಹೊಂದಿದ ಕೋತಿಯ ಅಂತ್ಯ ಸಂಸ್ಕಾರವನ್ನು ವಿಧಿವಿಧಾನಗಳ ಮೂಲಕ ನೆರವೇರಿಸಿದ್ದಾರೆ.

ರಾಮನಗರದಲ್ಲಿ ಸಾವಿಗೀಡಾದ ಮಂಗ
ರಾಮನಗರದಲ್ಲಿ ಸಾವಿಗೀಡಾದ ಮಂಗ

By

Published : May 25, 2022, 7:20 PM IST

Updated : May 25, 2022, 8:07 PM IST

ರಾಮನಗರ: ಮನುಷ್ಯ ಇಹಲೋಕ ತ್ಯಜಿಸಿದಾಗ ನಡೆಸುವ ಅಂತ್ಯ ಸಂಸ್ಕಾರದಂತೆ ಮಂಗಕ್ಕೂ ಸಹ ಎಲ್ಲ ವಿಧಿವಿಧಾನ ನೇರವೇರಿಸಿ ಗ್ರಾಮಸ್ಥರು ಮಾನವೀಯ ಕಾರ್ಯ ಮಾಡಿದ್ದಾರೆ. ತಾಲೂಕಿನ ಕೂಟಗಲ್ ಹೊಬಳಿಯ ಯರೇಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದೆ.

ಅಂತ್ಯ ಸಂಸ್ಕಾರ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಚೆಗೆ ಯರೇಹಳ್ಳಿ ಗ್ರಾಮಕ್ಕೆ ಬಂದಿದ್ದ ಕೋತಿ ಗ್ರಾಮಸ್ಥರ ಜೊತೆ ಅವಿನಾಭಾವ ಸಂಬಂಧ ಹೊಂದಿತ್ತು ಎನ್ನಲಾಗಿದೆ. ಇದ್ದಕ್ಕಿದ್ದಂತೆ ಮೇ 13 ರಂದು ಈ ಕೋತಿ ಅಕಾಲಿಕ ಮರಣ ಹೊಂದಿದೆ. ಇದರಿಂದ ನೊಂದ ಗ್ರಾಮಸ್ಥರು ಪ್ಲೆಕ್ಸ್​ ಹಾಕಿ ಅದಕ್ಕೆ ಗೌರವ ಸೂಚಿಸಿದ್ದಾರೆ. ನಂತರ ಮರಣ ಹೊಂದಿದ ಕೋತಿಯ ಅಂತ್ಯ ಸಂಸ್ಕಾರವನ್ನು ವಿಧಿವಿಧಾನಗಳ ಮೂಲಕ ನೆರವೇರಿಸಿದ್ದಾರೆ.

ಸಾವಿಗೀಡಾದ ಮಂಗ: ಧಾರ್ಮಿಕ ವಿಧಿವಿಧಾನ ನೆರವೇರಿಸಿದ ಗ್ರಾಮಸ್ಥರು

ಗ್ರಾಮದ ಜವರಾಯಿಗೌಡ ಅಂತ್ಯ ಸಂಸ್ಕಾರ ನೆರವೇರಿಸಿದ್ದು, ಅಂತ್ಯ ಸಂಸ್ಕಾರದ ಬಳಿಕ ಅನ್ನ ಸಂತರ್ಪಣೆ ಸಹ ನಡೆದಿದೆ.

ಇದನ್ನೂ ಓದಿ : ಯಾಸಿನ್ ಮಲಿಕ್​ಗೆ ಮರಣದಂಡನೆ ವಿಧಿಸುವಂತೆ ಎನ್​ಐಎ ಮನವಿ.. ಕೆಲಹೊತ್ತಿನಲ್ಲೇ ಮಹತ್ವದ ತೀರ್ಪು

Last Updated : May 25, 2022, 8:07 PM IST

ABOUT THE AUTHOR

...view details