ರಾಮನಗರ :ಗ್ಯಾಸ್, ಪೆಟ್ರೋಲ್, ಡೀಸೆಲ್ ಅಡುಗೆ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಆದರೆ, ಅದ್ಯಾವುದರ ಬಗ್ಗೆಯೂ ಚರ್ಚೆ ಇಲ್ಲ, ಚಕಾರ ಇಲ್ಲ. ಬೇಡದ ವಿಚಾರಗಳ ಬಗ್ಗೆ ಬೀದಿಯಲ್ಲಿ ಚರ್ಚೆ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮನಗರದ ಐಜೂರು ವೃತ್ತದಲ್ಲಿ ಕೇಂದ್ರ ಸರ್ಕಾರ ವಿರುದ್ದ ಖಾಲಿ ಗ್ಯಾಸ್ ಸಿಲಿಂಡರ್, ಖಾಲಿ ಎಣ್ಣೆ ಕ್ಯಾನ್ ಹಿಡಿದು ಪ್ರತಿಭಟಿಸಿದರು. ಪೆಟ್ರೋಲ್ ಹಾಗೂ ಡೀಸೆಲ್ ಹೆಚ್ಚಳ ಆಗುತ್ತಿರುವುದಕ್ಕೆ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಬಿಜೆಪಿ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾಸ್,ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರುದ್ಧ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿರುವುದು.. ಪೆಟ್ರೋಲ್ ಹಾಗೂ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ, ಸಾಮಾನ್ಯ ಜನರ ಬೆನ್ನುಮೂಳೆ ಮುರಿದಿದೆ. ರಾಜ್ಯ ಸರ್ಕಾರ ಏನ್ ಮಾಡುತ್ತಿದೆ. ಬೆಲೆ ಏರಿಕೆ ವಿಚಾರಗಳ ಬಗ್ಗೆ ಚರ್ಚೆಯಾಗಬೇಕು.
ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆ ಎಂಬಾತ ಆಜಾನ್ ಬಗ್ಗೆ ಬಾಯಿಬಿಟ್ಟಿದ್ದಾನೆ. ಮಸೀದಿಗಳಲ್ಲಿ ಧ್ವನಿವರ್ದಕ ಹಾಕಬಾರದೆಂದು ಹೇಳಿದ್ದಾನೆ. ಈಗ ಅದನ್ನ ಇಟ್ಟುಕೊಂಡು ಇಲ್ಲಿಯೂ ಸಹ ಧ್ವನಿ ಎತ್ತುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ.
ಇದನ್ನೂ ಓದಿ:ಮೈಕ್ ಬ್ಯಾನ್ ಅಭಿಯಾನ : ಮತ್ತೆ ಸಮುದಾಯದ ವಿರುದ್ಧ ಗುಟುರು ಹಾಕಿದ ಕಾಳಿಸ್ವಾಮಿಎಂದರು.