ರಾಮನಗರ: ಸಿಎಂ ಯಡಿಯೂರಪ್ಪ ಕೊಟ್ಟಿರುವ ಪ್ಯಾಕೇಜ್ ಕೇವಲ 1 ಸಾವಿರ, 2 ಸಾವಿರ. ಇದು ಕಡಲೆಪುರಿ ತಿನ್ನೋದಕ್ಕೂ ಆಗಲ್ಲ. ಸಂಕಷ್ಟದ ಮನೆಗಳಿಗೆ ಕನಿಷ್ಠ 10 ಸಾವಿರ ಕೊಡಲೇಬೇಕು. ಆಗ ಮಾತ್ರ ಯಡಿಯೂರಪ್ಪ ಪ್ಯಾಕೇಜ್ಗೆ ಬೆಲೆ. ಈ ಸರ್ಕಾರಕ್ಕೆ ತಾಕತ್ ಇದ್ದರೆ, ಶಕ್ತಿ ಇದ್ದರೆ, ಧೈರ್ಯ ಇದ್ದರೆ ಕ್ರಮವಹಿಸಲಿ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾತನಾಡಿದರು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೆಂಗಲ್ ಬಳಿ ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಸಮಾಧಿಗೆ ಪುಷ್ಪಾರ್ಚನೆ ನಡೆಸಿ ನಂತರ ಮಾತನಾಡಿದ ಅವರು, ಬೆಂಗಳೂರು ನಗರ 100 ಜನ ಶ್ರೀಮಂತರ ವಶದಲ್ಲಿದೆ. ಎಲ್ಲರೂ ಲೂಟಿ ಮಾಡಿದ್ದಾರೆ. ಒತ್ತುವರಿ ನಡೆದಿದೆ. ಅದನ್ನೆಲ್ಲ ವಶಕ್ಕೆ ಪಡೆದು ಮಾರಲಿ. ಅದರಲ್ಲಿ ಬಂದ ಹಣದಲ್ಲಿ ಬಡವರಿಗೆ ಪರಿಹಾರ ಕೊಡಲಿ ಎಂದು ಸಿಎಂ ಯಡಿಯೂರಪ್ಪ ವಿರುದ್ದ ವಾಗ್ಧಾಳಿ ನಡೆಸಿದರು.
ಓದಿ:ರಾಜ್ಯದಲ್ಲಿ ಮತ್ತೆ 14 ದಿನಗಳ ಲಾಕ್ಡೌನ್ ವಿಸ್ತರಣೆ ಮಾಡಿ ಮಹತ್ವದ ಆದೇಶ
ಪಿಯುಸಿ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಿ:
ಪರೀಕ್ಷೆಗಳಿಲ್ಲದೆ ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳನ್ನ ಪಾಸ್ ಮಾಡಬೇಕು ಎಂದು ಶಿಕ್ಷಣ ಸಚಿವರಿಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.
ಪರೀಕ್ಷೆ ಇಲ್ಲದೇ ಪಿಯುಸಿ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳನ್ನ ಪಾಸ್ ಮಾಡ್ಬೇಕು ಕೊರೊನಾದಿಂದ ವಿದ್ಯಾರ್ಥಿಗಳ ಭವಿಷ್ಯ ಆತಂತ್ರವಾಗಿ. 10 ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಪ್ರವಚನ ಆಗಿಲ್ಲ. ಇದರಿಂದ ಯಾವುದೇ ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳನ್ನ ಪಾಸ ಮಾಡುವಂತೆ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ.
ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಬೇಡಿ. ಪರೀಕ್ಷೆ ಮಾಡುತ್ತೇವೆ ಇಲ್ಲಾ ಮಾಡಲ್ಲಾ ಅಂತಾ ಒಂದು ನಿರ್ಧಾರ ಹೇಳಿ. ರಾಜ್ಯಾದ್ಯಂತ ವಿದ್ಯಾರ್ಥಿಗಳು ಓದಿಲ್ಲ ಆನ್ಲೈನ್ನಲ್ಲಿ ಪಾಠ ಕೂಡ ಕೇಳಿಲ್ಲ. ಎಷ್ಟೋ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಅಂದ್ರೆ ಗೊತ್ತೆ ಇಲ್ಲ ಎಂದರು.