ರಾಮನಗರ: ಬಿಡದಿಯ ಕೇತಿಗಾನಹಳ್ಳಿಯಲ್ಲಿ ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ಅವರ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆಗೆ ಯತ್ನಿಸಿದ್ದಾರೆ.
ಬಿಡದಿ ಬಳಿ ಎಸ್.ಆರ್.ಹಿರೇಮಠ ಮೇಲೆ ಹಲ್ಲೆ ಯತ್ನ - ರಾಮನಗರದ ಬಿಡದಿಯ ಕೇತಿಗಾನಹಳ್ಳಿ
ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ಅವರ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆಗೆ ಯತ್ನಿಸಿದ ಘಟನೆ ರಾಮನಗರದ ಬಿಡದಿಯ ಕೇತಿಗಾನಹಳ್ಳಿ ಬಳಿ ನಡೆದಿದೆ.
ಎಸ್. ಆರ್. ಹಿರೇಮಠ ಮೇಲೆ ಹಲ್ಲೆಗೆ ಯತ್ನ
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಕೇತಿಗಾನಹಳ್ಳಿ ಜಮೀನಿಗೆ ಸಂಬಂಧಿಸಿದಂತೆ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ಹಿನ್ನೆಲೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದರು.
ಸ್ವರಾಜ್ ಪಕ್ಷದ ರವಿ ಕೃಷ್ಣಾರೆಡ್ಡಿ ಸೇರಿದಂತೆ ಇತರರೊಂದಿಗೆ ಅಭಿಪ್ರಾಯ ಸಂಗ್ರಹಕ್ಕೆ ತೆರಳಿದ್ರು. ಈ ವೇಳೆ ಅಪರಿಚಿತರು ಅವರ ಕಾರಿನ ಚಕ್ರದ ಗಾಳಿ ತೆಗೆದು, ಹಲ್ಲೆಗೆ ಯತ್ನಿಸಿದ್ದಾರೆ. ಈ ಘಟನೆ ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.