ಕರ್ನಾಟಕ

karnataka

ETV Bharat / state

ಹಾಡಹಗಲೇ ಮಹಿಳೆಯ ಮಾಂಗಲ್ಯ ಸರ ಕಿತ್ತು ಪರಾರಿಯಾದ ಖದೀಮರು - ಮಾಂಗಲ್ಯ ಸರ ಕಿತ್ತು ಪರಾರಿಯಾದ ಖದೀಮರು

ರಾಮನಗರದ ಕೆಂಪೇಗೌಡನದೊಡ್ಡಿ ಗ್ರಾಮದಲ್ಲಿ ಖದೀಮರಿಬ್ಬರು ನಂಬರ್​ ಪ್ಲೇಟ್​ ಇಲ್ಲದ ಬೈಕಿನಲ್ಲಿ ಬಂದು ನಡೆದುಕೊಂಡ ಹೋಗುತ್ತಿದ್ದ ಮಹಿಳೆಯೊಬ್ಬಳ ಮಾಂಗಲ್ಯ ಸರವನ್ನು ಅಪಹರಿಸಿ ಪರಾರಿಯಾಗಿದ್ದಾರೆ.

Two thieves Snatched a gold Chain
ರಾಮನಗರ ಗ್ರಾಮಾಂತರ ಠಾಣೆ

By

Published : May 28, 2020, 9:29 PM IST

ರಾಮನಗರ: ತಾಲೂಕಿನ ಕೆಂಪೇಗೌಡನದೊಡ್ಡಿ ಗ್ರಾಮದಲ್ಲಿ ಹಾಡಹಗಲೇ ಕಳ್ಳನೊಬ್ಬ ಮಹಿಳೆಯ ಮಾಂಗಲ್ಯ ಸರ ಕಿತ್ತು ಪರಾರಿಯಾಗಿರುವ ಘಟನೆ ನಡೆದಿದೆ‌.

ಕೆಂಪೇಗೌಡನದೊಡ್ಡಿ ಗ್ರಾಮದ ರಾಜು ಎಂಬುವರ ಪತ್ನಿ ಮಂಜುಳಾ, ರಾಮನಗರಕ್ಕೆ ಕೆಲಸದ ನಿಮಿತ್ತ ಹೋಗಿ ವಾಪಸ್ ಊರಿಗೆ ಹಿಂತಿರುಗುವ ವೇಳೆ ರಸ್ತೆಯಲ್ಲಿ ಬಂದ ಅಪರಿಚಿತ ಬೈಕ್ ಸವಾರರು ಮಂಜುಳಾ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾಗಿದ್ದಾರೆ.

ಈ ವೇಳೆ ಮಂಜುಳಾ ಪ್ರತಿರೋಧ ವ್ಯಕ್ತಪಡಿಸಿದರು ಪ್ರಯೋಜನವಾಗಿಲ್ಲ. ಕಳ್ಳರು ತಂದಿದ್ದ ಬೈಕಿಗೆ ನಂಬರ್ ಪ್ಲೇಟ್ ಕೂಡ ಇರದ ಕಾರಣ ಮಂಜುಳಾ ಅವರಿಗೆ ಬೈಕ್​ ಯಾವುದೆಂದು ಸಹ ತಿಳಿಯದಂತಾಗಿದೆ.

ಒಟ್ಟು 43 ಗ್ರಾಂನಷ್ಟಿರುವ ಚಿನ್ನದ ಮಾಂಗಲ್ಯ ಸರವನ್ನು ಕಳೆದುಕೊಂಡ ಮಂಜುಳಾ, ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹಾಡಹಗಲೇ ಕಳ್ಳತನ ನಡೆದಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ.

ABOUT THE AUTHOR

...view details