ರಾಮನಗರ:ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಸರ ಎಗರಿಸಲು ಯತ್ನಸಿದ ಇಬ್ಬರು ಸರಗಳ್ಳರಿಗೆ ಸಾರ್ವಜನಿಕರೇ ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದೆ.
ಸರಗಳ್ಳತನಕ್ಕೆ ಯತ್ನಿಸಿದ ಖದೀಮರಿಗೆ ಸ್ಥಳೀಯರಿಂದ ಬಿತ್ತು ಗೂಸಾ - ಸರಗಳ್ಳರ ಬಂಧನ
ಗ್ರಾಮದಲ್ಲಿ ಮಹಿಳೆ ಹಸು ಮೇಯಿಸುತ್ತಿದ್ದ ವೇಳೆ ಬೈಕ್ನಲ್ಲಿ ಬಂದು ಕೃತ್ಯ ಎಸಗಿದ್ದರು. ಈ ವೇಳೆ ಥಳಿಸಿದ ಸ್ಥಳೀಯರು ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ಕಳ್ಳರು ತಮ್ಮ ಕಾಲುಗಳ ಬಳಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡಿದ್ದು ಪತ್ತೆಯಾಗಿದೆ.
ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಬಳಿ ಇರುವ ಕಬ್ಬಾಳಮ್ಮ ದೇವಾಲಯದ ಬಳಿ ಈ ಘಟನೆ ನಡೆದಿದ್ದು, ದೇವಾಲಯದ ಬಳಿ ಇಬ್ಬರು ಅಪರಿಚಿತ ವ್ಯಕ್ತಿಗಳು ಕರಗಮ್ಮ ಎಂಬ ಮಹಿಳೆಯ ಸರ ಕದ್ದು ಪರಾರಿಯಾಗಲು ಯತ್ನಿಸಿದ್ದರು. ಆಗ ಮಹಿಳೆ ಕಿರುಚಿಕೊಂಡಿದ್ದರಿಂದ ಹತ್ತಿರದಲ್ಲಿದ್ದ ಸಾರ್ವಜನಿಕರು ದೌಡಾಯಿಸಿ ಕಳ್ಳರನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ.
ಬಳಿಕ ಕಳ್ಳರನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ಕಳ್ಳರು ತಮ್ಮ ಕಾಲುಗಳ ಬಳಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡಿದ್ದು ಪತ್ತೆಯಯಾಗಿದೆ. ಕಳ್ಳತನ ವೇಳೆ ಬೆದರಿಸಲು ಇಟ್ಟುಕೊಂಡಿದ್ದ ಚಾಕು ಸಹ ಸಿಕ್ಕಿದ್ದು, ಆರೋಪಿಯನ್ನು ಸಾತನೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.