ರಾಮನಗರ: ಅರೇಹಳ್ಳಿ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬಂದೂಕು ಹಿಡಿದು ಆರು ಜನ ಬೈಕ್ಗಳಲ್ಲಿ ಅರಣ್ಯ ಪ್ರವೇಶಿಸಿದ್ದು ಬೇಟೆಯಾಡಲು ಹೊಂಚು ಹಾಕುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆ ಸಿಬ್ಬಂದಿ 6 ಆರೋಪಿಗಳನ್ನು ಬಲೆಗೆ ಕೆಡವಿದ್ದಾರೆ.
ವನ್ಯಜೀವಿಗಳ ಬೇಟೆಗೆ ಯತ್ನ: ಆರು ಖದೀಮರ ಬಂಧನ - ರಾಮನಗರದಲ್ಲಿ ಕಾಡುಪ್ರಾಣಿಗಳ ಬೇಟೆ
ತಾಲೂಕಿನ ಕಸಬಾ ಹೋಬಳಿ, ಅರೇಹಳ್ಳಿ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ವನ್ಯಜೀವಿ ಬೇಟೆಗೆ ಹೊಂಚು ಹಾಕಿದ್ದ ಆರು ಬೇಟೆಗಾರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ಜೈಲಿಗಟ್ಟಿದ್ದಾರೆ.
ಬಂಧಿತರಿಂದ ಆರು ದ್ವಿಚಕ್ರ ವಾಹನ, ಎರಡು ಒಂಟಿ ನಾಳ ಬಂದೂಕು ವಶಕ್ಕೆ ಪಡೆಯಲಾಗಿದೆ. ಚಿಕ್ಕೇಗೌಡನದೊಡ್ಡಿ ಗ್ರಾಮದ ಪುಟ್ಟಮಾದ, ಶೇಖರ್, ಈರ, ಕೆಂಚ, ತಮ್ಮಯ್ಯ, ರಾಮಗಿರಿ ಕಾಲೋನಿಯ ಕಬ್ಬಾಳ ಬಂಧಿತ ಆರೋಪಿಗಳು. ಇವರು ಮೀಸಲು ಅರಣ್ಯ ಪ್ರದೇಶದಲ್ಲಿ ಬಂದೂಕು ಹಿಡಿದು ಬೈಕ್ಗಳಲ್ಲಿ ಅರಣ್ಯ ಪ್ರವೇಶಿಸಿದ್ದು ಬೇಟೆಯಾಡಲು ಹೊಂಚುಹಾಕುತ್ತಿದ್ದಾರೆ ಎಂಬ ಖಚಿತ ಮಾಹಿತಿ ಬಂದಿತ್ತು. ಈ ಹಿನ್ನೆಲೆ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿಸಿಎಫ್ ದೇವರಾಜು, ಎಸಿಎಫ್ ಎಂ. ರಾಮಕೃಷ್ಣಪ್ಪ, ವಲಯ ಅರಣ್ಯಾಧಿಕಾರಿ ಧಾಳೇಶ್ ಮತ್ತು ಸಿಬ್ಬಂದಿ ಭಾಗಿಯಾಗಿದ್ದರು.