ಕರ್ನಾಟಕ

karnataka

ETV Bharat / state

ಸರ್ಕಾರದ ಮಾತು ಕೇಳದ ಸಾರಿಗೆ ನೌಕರರಿಗೆ ವರ್ಗಾವಣೆ ಶಿಕ್ಷೆ - ರಾಮನಗರದಿಂದ ಪುತ್ತೂರು ಡಿಪೋಗೆ ಸಾರಿಗೆ ಸಿಬ್ಬಂದಿ

6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ಸಿಬ್ಬಂದಿ ನಡೆಸುತ್ತಿರುವ ಮುಷ್ಕರ 4ನೇ ದಿನಕ್ಕೆ ಕಾಲಿಟ್ಟಿದೆ. ಇತ್ತ ಪಟ್ಟು ಬಿಡದ ನೌಕರರ ಪಟ್ಟು ಸಡಿಸಲು ಸರ್ಕಾರ ವರ್ಗಾವಣೆ ಅಸ್ತ್ರ ಪ್ರಯೋಗಿಸಿದ್ದು, ಸಾರಿಗೆ ನೌಕರರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

transportation employees transfered by state government
ಸರ್ಕಾರಿ ನೌಕರರ ವರ್ಗಾವಣೆ

By

Published : Apr 10, 2021, 10:35 AM IST

ರಾಮನಗರ/ದಾವಣಗೆರೆ:ಸಾರಿಗೆ ನೌಕರರ ಪ್ರತಿಭಟನೆ ಹಿನ್ನೆಲೆ ರಾಮನಗರ ಡಿಪೋದಿಂದ 18 ಸಾರಿಗೆ ನೌಕರರನ್ನು ಬೇರೆ ಡಿಪೋಗೆ ವರ್ಗಾವಣೆ ಮಾಡಿದ್ದು, ತಕ್ಷಣವೇ ಪುತ್ತೂರಿಗೆ ಹೋಗಿ ಕೆಲಸಕ್ಕೆ ಹಾಜರಾಗುವಂತೆ ಸರ್ಕಾರ ಆದೇಶ ಹೊರಡಿಸಿದೆ. ಕೆಲಸಕ್ಕೆ ಹಾಜರಾಗದಿದ್ದರೆ ಮತ್ತಷ್ಟು ಕಠಿಣ ನಿರ್ಧಾರಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಮತ್ತೊಂದೆ ದಾವಣಗೆರೆ ಜಿಲ್ಲೆಯಲ್ಲೂ ಕೆಲ ಸಿಬ್ಬಂದಿಯನ್ನು ಸರ್ಕಾರ ವರ್ಗಾವಣೆ ಮಾಡಿದೆ.

ಸಾರಿಗೆ ಮುಷ್ಕರ ಮುಂದಾಳತ್ವ ವಹಿಸಿದವರಿಗೆ ಟ್ರಾನ್ಸ್​ಫರ್​ :

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಾರಿಗೆ ನೌಕರರ ಮುಷ್ಕರ ಇಂದಿಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದ ಬೇಸತ್ತಿರುವ ಅಧಿಕಾರಿಗಳು ಮುಷ್ಕರದ ಮುಂದಾಳತ್ವ ವಹಿಸಿದ 17 ನೌಕರರನ್ನು ವರ್ಗಾವಣೆಗೊಳಿಸಿ ನೌಕರರಿಗೆ ಸರ್ಕಾರ ಬಿಸಿ ಮುಟ್ಟಿಸಿದೆ.

ಸರ್ಕಾರಿ ನೌಕರರ ವರ್ಗಾವಣೆ
ಸರ್ಕಾರಿ ನೌಕರರ ವರ್ಗಾವಣೆ
ಸರ್ಕಾರಿ ನೌಕರರ ವರ್ಗಾವಣೆ

ದಾವಣಗೆರೆಯ ಕೆಎಸ್​ಆರ್​ಟಿಸಿ ಕೇಂದ್ರೀಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 17 ಜನ ನೌಕರರು ರಾಮನಗರ, ಚಿಕ್ಕಮಗಳೂರು ಸೇರಿದಂತೆ ಬೆಂಗಳೂರು ಕೇಂದ್ರೀಯ ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ವರ್ಕ್ ಶಾಪ್, ಚಾಲಕ ಕಂ ನಿರ್ವಾಹಕರು ಸೇರಿ ಒಟ್ಟು 17 ಜನರಿಗೆ ವರ್ಗಾವಣೆ ಕಲ್ಪಿಸಲಾಗಿದ್ದು, ಮುಷ್ಕರವನ್ನು ವಾಪಸ್ಸು ಪಡೆಯುವಂತೆ ಈ ಅಸ್ತ್ರ ಪ್ರಯೋಗ ಮಾಡಲಾಗಿದೆ.

ನೌಕರರನ್ನು ವರ್ಗಾವಣೆ ಮಾಡಿದ್ದ ಬೆನ್ನಲ್ಲೇ ಸಾರಿಗೆ ಮುಷ್ಕರದ ತೀವ್ರತೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಪ್ರತಿಭಟನೆ ನಡೆಸದಂತೆ ಬಸ್ ನಿಲ್ದಾಣದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಇದನ್ನೂ ಓದಿ:ಹಾದಿ ತಪ್ಪಿದ ರಾಜ್ಯ ಸಾರಿಗೆ ನಿಗಮಗಳ ಆದಾಯ: 2 ವರ್ಷಗಳ ಆರ್ಥಿಕ ಸ್ಥಿತಿಗತಿ ಹೀಗಿದೆ!

ABOUT THE AUTHOR

...view details