ರಾಮನಗರ:ಕಾರ್ಮಿಕರು ಈ ಕೂಡಲೇ ಕೆಲಸಕ್ಕೆ ಹಾಜರಾಗಬೇಕು. ಸರ್ಕಾರ, ಆಡಳಿತ ಮಂಡಳಿ ಹಾಗೂ ಕಾರ್ಮಿಕ ಒಕ್ಕೂಟದ ಜೊತೆಗೆ ಮಾತುಕತೆ ನಡೆಸಲಿದೆ ಎಂದು ಮಾಗಡಿ ಶಾಸಕ ಎ. ಮಂಜು ತಿಳಿಸಿದ್ದಾರೆ.
ಬಿಡದಿಯ ಖಾಸಗಿ ಹೋಟೆಲ್‌ನಲ್ಲಿ ಮಾತನಾಡಿದ ಅವರು, ಟೊಯೋಟಾ ಕಾರ್ಮಿಕರು ಕಂಪನಿಯ ಆಡಳಿತ ಮಂಡಳಿಯ ಜೊತೆಗೆ ಮಾತುಕತೆ ನಡೆಸಲು ಮುಂದೆ ಬರುತ್ತಿಲ್ಲ.
ಜೊತೆಗೆ ಕಂಪನಿಯ ಆಡಳಿತ ಮಂಡಳಿ ಮುಷ್ಕರ ನಡೆಸುತ್ತಿರುವ ಕಾರ್ಮಿಕರಿಗೆ ನೋಟಿಸ್ ನೀಡಿದೆ. ಈಗ ಕಾರ್ಮಿಕರು ಕೆಲಸಕ್ಕೆ ಹಾಜರಾಗದಿದ್ದರೆ ಕೆಲಸವನ್ನ ಕಳೆದುಕೊಳ್ತಾರೆ. ಕೆಲಸದಿಂದ ಕಂಪನಿ ವಜಾ ಮಾಡಿದರೆ ಅವರ ಕುಟುಂಬಸ್ಥರಿಗೆ ಯಾರು ಜವಾಬ್ದಾರಿ? ಎಂದು ಪ್ರಶ್ನಿಸಿದ್ದಾರೆ.
ಓದಿ:ಅಪ್ರಾಪ್ತ ಬಾಲಕಿಯೊಂದಿಗೆ ಸ್ವಾಮೀಜಿ ಅನುಚಿತ ವರ್ತನೆ ಆರೋಪ: ಪೀಠ ತ್ಯಾಗ ಮಾಡಿಸಿದ ಗ್ರಾಮಸ್ಥರು!