ಕರ್ನಾಟಕ

karnataka

ETV Bharat / state

ಫಲಿಸಿದ ಡಿಸಿಎಂ ಜೊತೆಗಿನ ಮಾತುಕತೆ : ಟೊಯೋಟಾದಿಂದ ಲಾಕ್ ಡೌನ್ ವಾಪಸ್​ - ಟೊಯೋಟಾ ಕಿರ್ಲೋಸ್ಕರ್

ಡಿಸಿಎಂ ಡಾ. ಅಶ್ವತ್ಥ್​ ನಾರಾಯಣ್ ಹಾಗೂ ಟೊಯೋಟಾ ಕಿರ್ಲೋಸ್ಕರ್ ಆಡಳಿತ ಮಂಡಳಿ ನಡುವಿನ ಮಾತುಕತೆ ನಂತರ ಟೊಯೋಟಾ ಕಿರ್ಲೋಸ್ಕರ್ ಆಡಳಿತ ಮಂಡಳಿ ಲಾಕ್ ಡೌನ್ ವಾಪಸ್​ ಪಡೆದಿದೆ.

Toyota
ಟಯೋಟಾ

By

Published : Jan 12, 2021, 3:00 PM IST

ರಾಮನಗರ :ಡಿಸಿಎಂ ಡಾ. ಅಶ್ವತ್ಥ್​ ನಾರಾಯಣ್ ಅವರ ಯಶಸ್ವಿ ಮಾತುಕತೆ ಹಿನ್ನೆಲೆಯಲ್ಲಿ ಟೊಯೋಟಾ ಆಡಳಿತ ಮಂಡಳಿಯಿಂದ ಲಾಕ್​ಡೌನ್ ವಾಪಸ್​ ಪಡೆಯಲಾಗಿದೆ. ಕಿರ್ಲೋಸ್ಕರ್ ಯೂನಿಯನ್ ನಡೆಸಿದ ಮುಷ್ಕರದಿಂದಾಗಿ ನವೆಂಬರ್ 23 ರಿಂದ ಎರಡನೇ ಬಾರಿ ಟೊಯೋಟಾ ಕಿರ್ಲೋಸ್ಕರ್​ಅನ್ನು ಲಾಕ್ ಡೌನ್ ಮಾಡಲಾಗಿತ್ತು.‌

ಇದಲ್ಲದೆ ಸತತ 60 ದಿನಗಳಿಂದಲೂ ನಿಂತರವಾಗಿ ಕಾರ್ಮಿಕರು ಹೋರಾಟ ಮಾಡಿಕೊಂಡು ಬರುತ್ತಿದ್ದರು. ಈ ನಡುವೆ ಹಲವು ರಾಜಕೀಯ ಮುಖಂಡರು ಟಯೋಟಾ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವೆ ರಾಜೀ ಸಂದಾನ ನೆಡಸಿದ್ರು ಯಾವುದೇ ಪ್ರಯೋಜನ ಮಾತ್ರ ಆಗಿರಲಿಲ್ಲ.

ಈ ನಡುವೆ ಡಿಸಿಎಂ ಡಾ.ಅಶ್ವತ್ಥ್​ ನಾರಾಯಣ್ ಅವರು ಟೊಯೋಟಾ ಕಿರ್ಲೋಸ್ಕರ್ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಯಿತು. ಸಚಿವರ ಮಾತಿಗೆ ಗೌರವ ಕೊಟ್ಟು ಹಾಗೂ ಕಾರ್ಮಿಕರ ಹಿತ ದೃಷ್ಟಿಯಿಂದ ಇಂದಿನಿಂದ ಆಡಳಿತ ಮಂಡಳಿ ಲಾಕ್ ಡೌನ್ ವಾಪಸ್​ ಪಡೆದಿದೆ.

ಓದಿ...ಕೇಂದ್ರದ ಮೂರು ಕೃಷಿ ಕಾನೂನುಗಳಿಗೆ ತಡೆಯಾಜ್ಞೆ ನೀಡಿದ ಸುಪ್ರೀಂಕೋರ್ಟ್​

ಇಂದಿನಿಂದ ಎಂದಿನಂತೆ ಕಾರ್ಯ ನಿರ್ವಹಿಸಲಿರುವ ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆ ತಿಳಿಸಿದ್ದು, ಶಿಫ್ಟ್ ಬರುವಂತೆ ಕಾರ್ಮಿಕರಿಗೆ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಕಾರ್ಮಿಕರು ಮಾತ್ರ ಇನ್ನು ತಮ್ಮ ಹೋರಾಟ ನಿಲುವನ್ನ ಕೈ ಬಿಟ್ಟಿಲ್ಲ. ಮುಂದಿನ ದಿನಗಳಲ್ಲಿ ಕಾರ್ಮಿಕರು ಹೋರಾಟ ಬಿಟ್ಟು ಕೆಲಸಕ್ಕೆ ಹಾಜರು ಆಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details