ರಾಮನಗರ :ಇಡಿ ವಶದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ರನ್ನು ನ್ಯಾಯಾಲಯಕ್ಕೆ ಹಾಜರಿಪಡಿಸುವ ಹಿನ್ನಲೆ ಸ್ವಕ್ಷೇತ್ರ ಕನಕಪುರದಲ್ಲಿ ಬಿಗಿ ಪೋಲೀಸ್ ಬಂದೂಬಸ್ತ್ ಕೈಗೊಳ್ಳಲಾಗಿದೆ.
ಡಿಕೆಶಿ ಇಂದು ನ್ಯಾಯಾಲಯಕ್ಕೆ ಹಾಜರಾಗುವ ಹಿನ್ನಲೆ ಕನಕಪುರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ - Tight police security at Kankapur
ಡಿ.ಕೆ ಶಿವಕುಮಾರ್ ಇಡಿ ಕಸ್ಟಡಿ ಶುಕ್ರವಾರ ಮುಕ್ತಾಯಗೊಳ್ಳಲಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ಇಡಿ ಕಸ್ಟಡಿಗೆ ಕೇಳಿದರೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಡಿಕೆಶಿ ಅಭಿಮಾನಿಗಳು ರೊಚ್ಚಿಗೇಳುವ ಸಂಭವವಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆಯಿದೆ. ಈ ಹಿನ್ನಲೆ ಗುರುವಾರ ರಾತ್ರಿಯೇ ಕನಕಪುರದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಭದ್ರತೆಗೆ ಓರ್ವ ಎಸ್ಪಿ, 5 ಡಿವೈಎಸ್ಪಿ, 10 ಸಿಪಿಐ, 21 ಪಿಎಸ್ಐ, 50 ಎಎಸ್ಐ, 400 ಪಿಸಿ, 50 ಮಂದಿ ಹೋಮ್ ಗಾರ್ಡ್, 4 ಡಿಆರ್ ತುಕಡಿ, 4 ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಖುದ್ದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅನೂಪ್ ಎ.ಶೆಟ್ಟಿ ಕನಕಪುರದಲ್ಲಿ ಮೊಕ್ಕಾಂ ಹೂಡಿದ್ದು, ಭದ್ರತೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.