ರಾಮನಗರ :ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ವಯಂ ಲಾಕ್ಡೌನ್ಗೆ ಚಿಂತನೆ ನಡೆದಿದೆ. ನಾಳೆಯಿಂದ ಜುಲೈ 1ರ ತನಕ ರಾಮನಗರ ಲಾಕ್ಡೌನ್ಗೆ ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಜಿಲ್ಲೆಯ ರಾಮನಗರ, ಕನಕಪುರ ಮತ್ತು ಮಾಗಡಿ ತಾಲೂಕುಗಳು ಸ್ವಯಂ ನಿರ್ಧಾರದಂತೆ ಲಾಕ್ಡೌನ್ಗೆ ತೀರ್ಮಾನಿಸಿದ್ದವು. ಇದೀಗ ಮತ್ತೊಂದು ತಾಲೂಕು ಲಾಕ್ಡೌನ್ಗೆ ಸಹಮತ ನೀಡಿದ್ದು, ಈಗಾಗಲೇ ಜಿಲ್ಲೆಯ ಮೂರು ತಾಲೂಕುಗಳು ಲಾಕ್‌ಡೌನ್ ಆಗಲಿವೆ. ಚನ್ನಪಟ್ಟಣ ಕುರಿತು ಇನ್ನೂ ನಿರ್ಧಾರವಾಗಬೇಕಿದೆ.
ಜಿಲ್ಲಾಧಿಕಾರಿಗಳ ಸಭೆಯಲ್ಲಿ ರಾಮನಗರ ಟೌನ್ ನಾಳೆಯಿಂದ ಲಾಕ್ಡೌನ್ಗೆ ತೀರ್ಮಾನಿಸಿದ್ದು ವರ್ತಕರ ಸಂಘ, ಬಟ್ಟೆ ಅಂಗಡಿ ಮಾಲೀಕರ ಸಂಘ ಸೇರಿ ಸ್ಥಳೀಯ ಮುಖಂಡರು ಭಾಗಿಯಾಗಿದ್ದರು.
ಬೆಳಗ್ಗೆ 7 ರಿಂದ 11 ಘಂಟೆಯ ವರೆಗೂ ಅಂಗಡಿಗಳು ತೆರೆದಿರುತ್ತವೆ. ಬಳಿಕ ಲಾಕ್‌ಡೌನ್ ನಿಯಮಪಾಲನೆ ಕಡ್ಡಾಯವಾಗಿರುತ್ತದೆ. ನಗರ ಪ್ರದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಈ ನಿರ್ಧಾರ ಕೈಗೊಂಡಿದ್ದು, ಜುಲೈ 1ರವರೆಗೂ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಇಂದು 20 ಪಾಸಿಟಿವ್ ಪ್ರಕರಣ ಕಂಡು ಬಂದಿವೆ. ಸೋಂಕಿತರ ಸಂಖ್ಯೆ 112ಕ್ಕೆ ಏರಿಕೆಯಾಗಿದೆ. ಇಂದು ರಾಮನಗರ 5, ಕನಕಪುರ 2, ಮಾಗಡಿ 12, ಚನ್ನಪಟ್ಟಣದಲ್ಲಿ 1 ಪ್ರಕರಣ ದೃಢಪಟ್ಟಿವೆ.