ಬೆಂಗಳೂರು/ರಾಮನಗರ:ಈ ಬಜೆಟ್ ಶ್ರೀಸಾಮಾನ್ಯನಿಗೆ ಪ್ರಯೋಜನವಿಲ್ಲ. ಪೆಟ್ರೋಲ್ ಡೀಸೆಲ್ ಮೇಲೆ ಸೆಸ್ ಹಾಕೋದ್ರಿಂದ ಬಡವರಿಗೆ ಕಷ್ಟವಾಗುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ಡಿಸಿಎಂ ಡಾ. ಜಿ.ಪರಮೇಶ್ವರ್ ನಿವಾಸದ ಎದುರು ಮಾತನಾಡಿದ ಅವರು, ಯಾವುದೇ ವಿಶೇಷ ಯೋಜನೆಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನ ಬಿಜೆಪಿಗೆ ಮತ ಹಾಕಿದ್ದರು. ರಾಜ್ಯದ ಜನರ ಋಣ ತೀರಿಸೋಕಾದ್ರು, ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ಯೋಜನೆ ನೀಡಬೇಕಿತ್ತು. ಕೇಂದ್ರ ಸರ್ಕಾರದ ಧೋರಣೆ ಸರಿಯಿಲ್ಲ ಎಂದರು. ಸಾಮಾಜಿಕ, ಕೃಷಿ, ಉದ್ಯೋಗ, ನೀರಾವರಿ ವಲಯಕ್ಕೆ ಹೆಚ್ಚು ಹಣ ಕೊಡಬೇಕಿತ್ತು. ಮೋದಿ ಮತ್ತು ನಿರ್ಮಲಾ ಸೀತಾರಾಮನ್ ನಾವು ಏನು ಮಾಡಿದ್ರು ನಡೆಯುತ್ತೆ ಅಂತ ಭಾವಿಸಿದ್ದಾರೆ. ಈ ಬಜೆಟ್ ಜನ ವಿರೋಧಿ ಬಜೆಟ್ ಎಂದು ಹೇಳಿದ್ದಾರೆ.