ರಾಮನಗರ:ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಕೈಚಳಕ ತೋರಿದ್ದು ಚಿನ್ನಾಭರಣ ಸೇರಿದಂತೆ ಹಣ ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಕೈಲಾಂಚ ಹೋಬಳಿಯ ಜಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಳ್ಳರ ಕೈಚಳಕ: ಸಂಬಂಧಿಕರ ತಿಥಿಕಾರ್ಯಕ್ಕೆ ಹೋದವರ ಮನೆಗೆ ಕನ್ನ - ರಾಮನಗರದಲ್ಲಿ ಕಳ್ಳರ ಕೈಚಳಕ
ಮನೆಯಲ್ಲಿದ್ದ 85 ಗ್ರಾಂ ಚಿನ್ನ, ಎರಡೂವರೆ ಲಕ್ಷ ಹಣವನ್ನು ಕಳ್ಳರು ಕದ್ದೊಯ್ದಿದ್ದಾರೆ.
![ಕಳ್ಳರ ಕೈಚಳಕ: ಸಂಬಂಧಿಕರ ತಿಥಿಕಾರ್ಯಕ್ಕೆ ಹೋದವರ ಮನೆಗೆ ಕನ್ನ ramanagara](https://etvbharatimages.akamaized.net/etvbharat/prod-images/768-512-5325965-thumbnail-3x2-rmn.jpg)
ಕೃಷ್ಣಯ್ಯ ಎಂಬುವವರ ಮನೆ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಬೀರು ಬಾಗಿಲು ಒಡೆದು ಅದರಲ್ಲಿದ್ದ 85 ಗ್ರಾಂ. ಚಿನ್ನ, 2.5 ಲಕ್ಷ ಹಣ ದೋಚಿ ಪರಾರಿಯಾಗಿದ್ದಾರೆ. ಕಳ್ಳರು ಮನೆಯಲ್ಲಿ ಯಾರೂ ಇಲ್ಲದಿರುವ ಬಗ್ಗೆ ಖಾತರಿಪಡಿಸಿಕೊಂಡು ಮನೆಗೆ ನುಗ್ಗಿದ್ದಾರೆ. ಅದೇ ಗ್ರಾಮದಲ್ಲಿ ಸಂಬಂಧಿಕರ ತಿಥಿ ಕಾರ್ಯಕ್ಕೆ ಮನೆ ಮಂದಿ ಹೋಗಿದ್ದರು ಎನ್ನಲಾಗಿದೆ. ಇದೇ ಸಮಯವನ್ನು ಬಳಸಿಕೊಂಡು ಕಳ್ಳತನ ಮಾಡಲಾಗಿದೆ.
ಮನೆಯಲ್ಲಿ ಒಡವೆ ಮತ್ತು ಹಣ ಇರುವ ಬಗ್ಗೆ ಮಾಹಿತಿ ಇರುವವರೇ ಕಳ್ಳತನ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ರಾಮನಗರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸಬ್ ಇನ್ಸ್ಪೆಕ್ಟರ್ ಮತ್ತು ತಂಡ ಭೇಟಿನೀಡಿ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.