ರಾಮನಗರ :ಚನ್ನಪಟ್ಟಣದ ಸಿಲ್ಕ್ ಫಾರಂ ಬಳಿ ಮಳೆ ಜೋರಾಗಿದ್ದರಿಂದ ರಸ್ತೆ ಬದಿ ಕಾರು ನಿಲ್ಲಿಸಿ ನಿಂತಿದ್ದ ವೇಳೆ ಕಾರಿಗೆ ಕಲ್ಲಿನಿಂದ ಹೊಡೆದು ಜಖಂಗೊಳಿಸಿ, ಕತ್ತಿನಲ್ಲಿದ್ದ ಚಿನ್ನದ ಸರ ಅಪಹರಣ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕತ್ತಲಿನಲ್ಲಿ ಕತ್ತಿನಲ್ಲಿದ್ದ ಸರ ಅಪಹರಿಸಿದವನ ಬಂಧನ - ramanagar crime news
ನಿಲ್ಲಸಿದ್ದ ಕಾರಿಗೆ ಕಲ್ಲಿನಿಂದ ಹೊಡೆದು ಮಾಲೀಕನ ಕುತ್ತಿಗೆಯಲ್ಲಿದ್ದ ಬಂಗಾರದ ಸರ ಅಪಹರಿಸಿದ್ದ ಊಟಗಳ್ಳಿಯ ಗಣೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಚನ್ನಪಟ್ಟಣದ ಸಿಲ್ಕ್ ಫಾರಂ ಮುಂಭಾಗದ ರಸ್ತೆ ಬದಿಯಲ್ಲಿ ಕೃಷ್ಣ ಎಂಬಾತ ಕಾರು ನಿಲ್ಲಿಸಿಕೊಂಡು ನಿಂತಿದ್ದನು. ಈ ವೇಳೆ ಕಳ್ಳತನ ಮಾಡುವ ಉದ್ದೇಶದಿಂದ ಮೈಸೂರು ಮೂಲದ ಗಣೇಶ್ ಎಂಬಾತ ಚನ್ನಪಟ್ಟಣ ಕಡೆಯಿಂದ ನಡೆದುಕೊಂಡು ಬಂದು ಸರ ಕಿತ್ತುಕೊಂಡು ಪರಾರಿಯಾಗಿದ್ದನು. ಈ ಬಗ್ಗೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇದೀಗ ಮೈಸೂರು ಊಟಗಳ್ಳಿಯ ಗಣೇಶ್ ಎಂಬುವವನನ್ನು ಬಂಧಿಸಿದ್ದು, ಆರೋಪಿಯಿಂದ ಸುಮಾರು 29.500. ಗ್ರಾಂ ತೂಕದ ಚಿನ್ನದ ಚೈನು ವಶಕ್ಕೆ ಪಡೆದದಿದ್ದಾರೆ.
ಕೃತ್ಯಕ್ಕೆ ಬಳಸಲಾದ ಗೂಡ್ಸ್ ಕ್ಯಾರಿಯರ್ ವಾಹನ ಸೇರಿ ಒಟ್ಟು 5 ಲಕ್ಷ ಮೌಲ್ಯದ ಮಾಲು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ಇದೀಗ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.