ಕರ್ನಾಟಕ

karnataka

ETV Bharat / state

ಚಾಮುಂಡೇಶ್ವರಿ ಐತಿಹಾಸಿಕ ಕರಗ ಮಹೋತ್ಸವಕ್ಕೆ ಈ ಬಾರಿ ಅವಕಾಶವಿಲ್ಲ: ರಾಮನಗರ ಡಿಸಿ - Chamundeshwari karaga mahotsav

ರೇಷ್ಮೆನಗರಿ ಖ್ಯಾತಿಯ ರಾಮನಗರದ ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಐತಿಹಾಸಿಕ ಕರಗ ಮಹೋತ್ಸವಕ್ಕೆ ಈ ಬಾರಿ ಅನುಮತಿಯಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

karaga mahotsav
ಕರಗ ಮಹೋತ್ಸವ ಕುರಿತು ಪೂರ್ವಭಾವಿ ಸಭೆ

By

Published : Jul 24, 2021, 7:36 PM IST

ರಾಮನಗರ:ಕೋವಿಡ್ ಹಿನ್ನೆಲೆಯಲ್ಲಿ ರಾಮನಗರದ ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಐತಿಹಾಸಿಕ ಕರಗ ಮಹೋತ್ಸವಕ್ಕೆ ಈ ಬಾರಿ ಅನುಮತಿಯಿಲ್ಲ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಕೆ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕರಗ ಮಹೋತ್ಸವ ಕುರಿತು ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು. ರಾಮನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯ, ತೋಪ್ ಖಾನ್ ಮೊಹಲ್ಲಾದಲ್ಲಿರುವ ಶ್ರೀ ಮುತ್ತು ಮಾರಮ್ಮ ದೇವಸ್ಥಾನ, ಬಾಲಗೇರಿಯ ಶ್ರೀ ಮಗ್ಗದ ಕೇರಿ ಮಾರಮ್ಮ, ಬಾಲಗೇರಿಯ ಭಂಡಾರಮ್ಮ ದೇವಸ್ಥಾನ, ಶೆಟ್ಟಳ್ಳಿ ಬೀದಿಯ ಆದಿಶಕ್ತಿ ದೇವಸ್ಥಾನ, ಐಜೂರು ಆದಿಶಕ್ತಿ ಪುರದ ಆದಿಶಕ್ತಿ ದೇವಸ್ಥಾನ ಹಾಗೂ ಕೊಂಕಣಿ ದೊಡ್ಡಿ ಆದಿಶಕ್ತಿ ದೇವಸ್ಥಾನಗಳಲ್ಲಿ ಕರಗ ಮಹೋತ್ಸವ ನಡೆಸಲು ಅವಕಾಶವಿಲ್ಲ ಎಂದು ತಿಳಿಸಿದರು.

ದೇವಸ್ಥಾನದ ಮುಖ್ಯಸ್ಥರಿಗೆ ಈ ಕುರಿತಂತೆ ತಿಳಿಸಿ, ಪೂಜಾ ಕೈಂಕರ್ಯಗಳನ್ನು ಮಾತ್ರ ಕೈಗೊಳ್ಳುವಂತೆ ಪತ್ರ ಬರೆಯುವಂತೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದ್ದಾರೆ.

ಇದನ್ನೂ ಓದಿ:ಮುರುಗೇಶ್ ನಿರಾಣಿಗೆ ಸಿಎಂ ಪಟ್ಟ ನೀಡಿದರೆ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ: ಕಾರಜೋಳ ಎಚ್ಚರಿಕೆ?

ABOUT THE AUTHOR

...view details