ಕರ್ನಾಟಕ

karnataka

ETV Bharat / state

ರಾಜ್ಯ ಸರ್ಕಾರ ಜನರಿಂದ ಆಯ್ಕೆಯಾಗಿಲ್ಲ, ಸಿಡಿಯಿಂದ ಆಯ್ಕೆಯಾಗಿದೆ: ಡಿ.ಕೆ.ಸುರೇಶ್ ವ್ಯಂಗ್ಯ

ಸಿಡಿಗಳು ಒಂದೊಂದೇ ಬಿಡುಗಡೆಯಾಗುತ್ತಿವೆ. ಸ್ವತಃ ಈಶ್ವರಪ್ಪ, ಯತ್ನಾಳ್ ಸರ್ಕಾರ ಸರಿ ಇಲ್ಲ, ಮುಖ್ಯಮಂತ್ರಿ ಸರಿ ಇಲ್ಲ ಎಂದು ಹೇಳುತ್ತಿದ್ದಾರೆ. ಬಿಜೆಪಿ ಶಿಸ್ತಿನ ಪಕ್ಷ ಅಂತಾರೆ. ಹಾಗಿದ್ರೆ ಈಶ್ವರಪ್ಪ, ಯತ್ನಾಳ್ ವಿರುದ್ಧ ಕ್ರಮ ಏಕೆ ಕೈಗೊಂಡಿಲ್ಲ ಎಂದು ಡಿ.ಕೆ.ಸುರೇಶ್​​ ಪ್ರಶ್ನೆ ಮಾಡಿದ್ರು.

ಡಿ.ಕೆ.ಸುರೇಶ್
ಡಿ.ಕೆ.ಸುರೇಶ್

By

Published : Apr 6, 2021, 9:27 PM IST

ರಾಮನಗರ:ರಾಜ್ಯ ಸರ್ಕಾರ ಜನರಿಂದ ಆಯ್ಕೆಯಾದ ಸರ್ಕಾರ ಅಲ್ಲ, ಇದು ಸಿಡಿಯಿಂದ ಆಯ್ಕೆಯಾದ ಸರ್ಕಾರ ಎಂದು ಸಂಸದ ಡಿ.ಕೆ.ಸುರೇಶ್ ವ್ಯಂಗ್ಯವಾಡಿದ್ರು.

ರಾಮನಗರ ಜಿಲ್ಲೆ ಚನ್ನಪಟ್ಟಣದ ಚೇತನ ಸಮುದಾಯ ಭವನದಲ್ಲಿ ನಗರಸಭೆ ಚುನಾವಣೆ ಸಂಬಂಧ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಿಡಿಗಳು ಒಂದೊಂದೇ ಬಿಡುಗಡೆಯಾಗುತ್ತಿವೆ. ಸ್ವತಃ ಈಶ್ವರಪ್ಪ, ಯತ್ನಾಳ್ ಸರ್ಕಾರ ಸರಿ ಇಲ್ಲ, ಮುಖ್ಯಮಂತ್ರಿ ಸರಿ ಇಲ್ಲ ಎಂದು ಹೇಳುತ್ತಿದ್ದಾರೆ. ಬಿಜೆಪಿ ಶಿಸ್ತಿನ ಪಕ್ಷ ಅಂತಾರೆ. ಹಾಗಿದ್ರೆ ಈಶ್ವರಪ್ಪ, ಯತ್ನಾಳ್ ವಿರುದ್ಧ ಕ್ರಮ ಏಕೆ ಕೈಗೊಂಡಿಲ್ಲ ಎಂದು ಪ್ರಶ್ನೆ ಮಾಡಿದ್ರು.

ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಡಿ.ಕೆ.ಸುರೇಶ್

ರಾಮನಗರ ಕ್ಷೇತ್ರದ ಮೇಲೆ ಕಾಂಗ್ರೆಸ್ ನಾಯಕರ ಕ್ರೂರ ದೃಷ್ಟಿ ಬೀರಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಸುರೇಶ್ ಟಾಂಗ್ ನೀಡಿದ್ರು. ಅವರು ಯಾವ ದೃಷ್ಟಿಯಿಂದ ನೋಡಿದ್ದಾರೋ ಗೊತ್ತಿಲ್ಲ. ಅವರಿಗೆ ಯಾವ ಸಮಯದಲ್ಲಿ ಯಾವ ರೀತಿ ಕಾಣುತ್ತೋ ಗೊತ್ತಿಲ್ಲ. ಹಗಲಿನಲ್ಲಿ ಯಾವ ರೀತಿ, ಬೇರೆ ಸಂದರ್ಭದಲ್ಲಿ ಯಾವ ರೀತಿ ಕಾಣ್ಸುತ್ತೋ ನಮಗೆ ಗೊತ್ತಿಲ್ಲ. ಅವರು ಹಿರಿಯರು, ಪ್ರಭಾವಿಗಳು. ಅವರ ಮಾತನ್ನ ಕೇಳುತ್ತೇವೆ ಎಂದು ಲೇವಡಿ ಮಾಡಿದ್ರು.

ಸಾರಿಗೆ ನೌಕರರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಎಲ್ಲೋ ಒಂದು ಕಡೆ ಸಾರಿಗೆ ಇಲಾಖೆಯನ್ನ ಖಾಸಗೀಕರಣ ಮಾಡುತ್ತಿದ್ದಾರಾ ಎಂಬ ಆತಂಕ ಇದೆ. ಹಾಗಾಗಿ ನೌಕರರಿಗೆ ಹೋರಾಟ ಅನಿವಾರ್ಯ ಇದೆ ಎಂದು ಹೇಳಿದ್ರು.

ಇದನ್ನೂ ಓದಿ..ಪಂಚರಾಜ್ಯ ಫೈಟ್​​: ಅಸ್ಸೋಂನಲ್ಲಿ ಶೇ. 82, ಬಂಗಾಳದಲ್ಲಿ ಶೇ.78ರಷ್ಟು ಸೇರಿ ಯಾವ ರಾಜ್ಯದಲ್ಲಿ ಎಷ್ಟು!?

ABOUT THE AUTHOR

...view details