ರಾಮನಗರ:ತಾಲೂಕಿನ ಕೈಲಾಂಚ ಹೋಬಳಿಯ ನಂಜಾಪುರ-ಕುರುಬಹಳ್ಳಿದೊಡ್ಡಿ ಮಧ್ಯೆ ಹಳ್ಳದಲ್ಲಿ ಸಿಲುಕಿದ್ದ ಸುಮಾರು 8 ವರ್ಷದ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ರಾಮನಗರ: ಹಳ್ಳದಲ್ಲಿ ಸಿಲುಕಿದ್ದ ಕರಡಿ ರಕ್ಷಿಸಿ ಕಾಡಿಗೆ ಬಿಟ್ಟ ಅರಣ್ಯ ಇಲಾಖೆ ಸಿಬ್ಬಂದಿ - Forest Department staff
ಕೈಲಾಂಚ ಹೋಬಳಿಯ ನಂಜಾಪುರ-ಕುರುಬಹಳ್ಳಿದೊಡ್ಡಿ ಮಧ್ಯೆ ಬೇಟೆಗಾಗಿ ಯಾರೋ ಬೇಟೆಗಾರರು ಹಾಕಿರುವ ಉರುಳಿಗೆ ಕರಡಿ ಸಿಲುಕಿದೆ. ಕರಡಿಯನ್ನು ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಬಿಟ್ಟಿದ್ದಾರೆ.
![ರಾಮನಗರ: ಹಳ್ಳದಲ್ಲಿ ಸಿಲುಕಿದ್ದ ಕರಡಿ ರಕ್ಷಿಸಿ ಕಾಡಿಗೆ ಬಿಟ್ಟ ಅರಣ್ಯ ಇಲಾಖೆ ಸಿಬ್ಬಂದಿ ಹಳ್ಳದಲ್ಲಿ ಸಿಲುಕಿದ್ದ ಕರಡಿ](https://etvbharatimages.akamaized.net/etvbharat/prod-images/768-512-8495075-1066-8495075-1597934328014.jpg)
ಚನ್ನಪಟ್ಟಣ ಅರಣ್ಯ ಪ್ರದೇಶದ ತೆಂಗಿನಕಲ್ಲು ಅರಣ್ಯವಲಯ ವ್ಯಾಪ್ತಿಗೆ ಬರುವ ನಂಜಾಪುರ-ಕುರುಬಳ್ಳಿದೊಡ್ಡಿ-ಕಾಡನಕುಪ್ಪೆ-ಹೊಸದೊಡ್ಡಿ ಈ ಭಾಗದ ಬೆಟ್ಟಗುಡ್ಡಗಳಲ್ಲಿ ಕರಡಿಗಳು ವಾಸವಾಗಿವೆ. ಆಹಾರ ಅರಸಿ ಕರಡಿಗಳು ಸುತ್ತಮುತ್ತಲ ಪ್ರದೇಶದಲ್ಲಿ ರಾತ್ರಿ ವೇಳೆ ಸಂಚರಿಸುತ್ತವೆ.
ಕಾಡು ಪ್ರಾಣಿ ಬೇಟೆಗಾಗಿ ಯಾರೋ ಬೇಟೆಗಾರರು ತೆಂಗಿನಕಲ್ಲು ಅರಣ್ಯದ ಯಾವುದೋ ಸುತ್ತಮುತ್ತಲ ಪ್ರದೇಶದಲ್ಲಿ ಉರುಳು ಹಾಕಿದ್ದಾರೆ. ಆಹಾರ ಅರಸಿ ಬರುತ್ತಿದ್ದ ಕರಡಿ ಉರುಳಿಗೆ ಸಿಲುಕಿದೆ. ಅಲ್ಲಿಂದ ಹೊರ ಬರಲಾರದೆ ಕರಡಿ ಚೀರಾಟ ನಡೆಸಿದ್ದು, ಅಕ್ಕಪಕ್ಕದ ಜಮೀನಿನವರು ಕೃಷಿ ಕೆಲಸ ನಿರ್ವಹಿಸಲು ಬಂದಾಗ ಕರಡಿ ಚೀರಾಟ ಕೇಳಿ ಸ್ಥಳೀಯರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಬನ್ನೇರುಘಟ್ಟದಿಂದ ವೈದ್ಯರನ್ನು ಕರೆಸಿ ಅರವಳಿಕೆ ಚುಚ್ಚುಮದ್ಧು ನೀಡಿ, ಕರಡಿಯನ್ನು ಉರುಳಿನಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಬನ್ನೇರುಘಟ್ಟ ಅರಣ್ಯಪ್ರದೇಶಕ್ಕೆ ಬಿಡಲಾಗಿದೆ.