ರಾಮನಗರ:ಭಾರತೀಯ ಜುನತಾ ಪಕ್ಷವನ್ನು ಮುಗಿಸಲು ಬೇರೆಯವರು ಹೊರಟಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆ - ಬಿಜೆಪಿ ಒಟ್ಟಿಗೆ ಚುನಾವಣೆ ಎದುರಿಸಿದ್ದು, ಹಾಗಾಗಿ ನಮ್ಮ ಹಕ್ಕು ಅದು, ಬಿಜೆಪಿ ಯಾರನ್ನೂ ಮುಗಿಸಲು ಹೋಗಿಲ್ಲ. ಕೆಲವೊಂದು ವ್ಯತ್ಯಾಸಗಳು ಆಗಿವೆ ಅಷ್ಟೇ ಎಂದು ಸಚಿವ ಅಶ್ವತ್ಥನಾರಾಯಣ ಅವರು ಮಹಾರಾಷ್ಟ್ರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಯಾರನ್ನೂ ಮುಗಿಸಲು ಹೊರಟಿಲ್ಲ: ಸಚಿವ ಅಶ್ವತ್ಥನಾರಾಯಣ - ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಮಾತನಾಡಿದ ಅಶ್ವತ್ಥನಾರಾಯಣ
ನ್ಯಾಯ ಸಮ್ಮತವಾಗಿ ಬಿಜೆಪಿ ಸರ್ಕಾರ ಮಹಾರಾಷ್ಟ್ರದಲ್ಲಿ ಇರಬೇಕಿತ್ತು. ಬಿಜೆಪಿ ಯಾರನ್ನೂ ಮುಗಿಸಲು ಹೋಗಿಲ್ಲ. ಕೆಲವೊಂದು ವ್ಯತ್ಯಾಸಗಳು ಆಗಿವೆ ಅಷ್ಟೇ ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದರು.
ಸಚಿವ ಅಶ್ವತ್ಥನಾರಾಯಣ
ರಾಮನಗರ ಜಿಲ್ಲೆಯ ಬಿಡದಿಯ ಟೊಯೋಟಾ ಕಂಪನಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ನ್ಯಾಯ ಸಮ್ಮತವಾಗಿ ಬಿಜೆಪಿ ಸರ್ಕಾರ ಮಹಾರಾಷ್ಟ್ರದಲ್ಲಿ ಇರಬೇಕಿತ್ತು. ಆದ್ರೆ ಬೇರೆಯವರು ಅದರ ಲಾಭವನ್ನ ಪಡೆಯಲು ಹೊರಟಿದ್ದಾರೆ ಎಂದರು.
ಇದನ್ನೂ ಓದಿ:ಬೆಳಗಾವಿ ರಸ್ತೆ ಅಪಘಾತ: ಮೃತರ ಕುಟುಂಬಕ್ಕೆ ತಲಾ 7 ಲಕ್ಷ ರೂ. ಪರಿಹಾರ ಘೋಷಣೆ