ರಾಮನಗರ: 'ಅತ್ತೆ ಕೊಟ್ಟ ಕಾಟ ಸೊಸೆಗೆ ಗೊತ್ತು, ಸೊಸೆ ಕೊಟ್ಟ ಕಾಟ ಅತ್ತೆಗೆ ಗೊತ್ತು' ಅದೇ ರೀತಿ ನಮಗಾಗಿರುವ ಸಮಸ್ಯೆಗಳು ನಮಗೆ ಗೊತ್ತಿದೆ ಎಂದು ಚನ್ನಪಟ್ಟಣದಲ್ಲಿ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಅವರು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಹೆಸರನ್ನೇಳದೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
''ಅತ್ತೆ ಕಾಟ ಸೊಸೆಗೆ ಗೊತ್ತು, ಸೊಸೆ ಕಾಟ ಅತ್ತೆಗೆ ಗೊತ್ತು.. ನಮ್ಮ ಸಮಸ್ಯೆಗಳು ನಮ್ಗೆ ಗೊತ್ತು'' - ಚನ್ನಪಟ್ಟಣ ಸುದ್ದಿ
ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯುತ್ತಿದ್ದು, 100 % ಗೆಲ್ಲುವ ವಿಶ್ವಾಸವಿದೆ. ಜೆಡಿಎಸ್ನಲ್ಲಿದ್ದಾಗಲೇ ಚುನಾವಣೆ ಗೆಲ್ಲುವ ಭಯವಿತ್ತು. ಆದ್ರೆ ಈಗ ಯಾವುದೇ ಭಯವಿಲ್ಲ, ನಾನು ಸುಳ್ಳು ಹೇಳಲ್ಲ, ಮೋಸ ಮಾಡಲ್ಲ. ಮೋಸ ಮಾಡುವ ಮನಸ್ಸು ಬಂದ್ರೆ ನನ್ನ ಕ್ಷೇತ್ರವನ್ನೇ ಬಿಡ್ತೇನೆ ಎಂದು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪುಟ್ಟಣ್ಣ, ಮತಯಾಚನೆಗಾಗಿ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದೇನೆ. 100 % ಗೆಲ್ಲುವ ವಿಶ್ವಾಸವಿದೆ, ಜೆಡಿಎಸ್ನಲ್ಲಿದ್ದಾಗಲೇ ಚುನಾವಣೆ ಗೆಲ್ಲುವ ಭಯವಿತ್ತು. ಆದರೆ ಈಗ ಯಾವುದೇ ಭಯವಿಲ್ಲ, ನಾನು ಸುಳ್ಳು ಹೇಳಲ್ಲ, ಮೋಸ ಮಾಡಲ್ಲ, ಮೋಸ ಮಾಡುವ ಮನಸ್ಸು ಬಂದ್ರೆ ನನ್ನ ಕ್ಷೇತ್ರವನ್ನೇ ಬಿಡ್ತೇನೆ ಎಂದರು.
ಈ ವ್ಯವಸ್ಥೆಯಲ್ಲಿ ಯಾರ್ಯಾರು ಏನೇನು ಆಗಿದ್ದಾರೆಂದು ನೋಡಿದ್ದು, ಸಮಯ ಸಂದರ್ಭ ಬರಲಿ ಮಾತಾಡ್ತೇನೆ. ಈಗ ಗುಡ್ಡನೇ ಕುಸಿಯುತ್ತಿದೆ, ಅದನ್ನ ಕಟ್ಟಿಟ್ಟುಕೊಳ್ಳಲಿ ಅಷ್ಟೇ. ಪ್ರತಿಯೊಬ್ಬ ಕಾರ್ಯಕರ್ತನು ಕೂಡ ಮುಖ್ಯ. ಆ ರೀತಿ ಇದ್ರೆ ನಾನು ಕಟ್ಟಿದ್ದನ್ನ ಉಳಿಸಿಕೊಳ್ಳಲು ಸಾಧ್ಯ. ಇಲ್ಲವೆಂದ್ರೆ ನಾನು ಉಳಿಯಲು ಸಾಧ್ಯವಿಲ್ಲ ಎಂದು ಅವರು ಜೆಡಿಎಸ್ನಲ್ಲಿ ಒಂದೊಂದೇ ಇಟ್ಟಿಗೆಗಳು ಹೋಗ್ತಾ ಇವೆ, ಅದು ಆಗಬಾರದು, ಅವರಿಗೆ ಒಳ್ಳೆಯದಾಗಲಿ ಎಂದ ಪುಟ್ಟಣ್ಣ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೆಸರನ್ನೇಳದೇ ಮಾತಿನ ಚಾಟಿ ಬೀಸಿದ್ರು.