ರಾಮನಗರ :ಚನ್ನಪಟ್ಟಣ ನಗರಸಭೆಯ ಮೂರು ವಾರ್ಡ್ಗಳಿಗೆ ಇವತ್ತು ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಯಿತು.
ಚನ್ನಪಟ್ಟಣ ನಗರಸಭೆಯ ಮೂರು ವಾರ್ಡ್ಗಳಿಗೆ ಟ್ಯಾಂಕರ್ ನೀರು ಪೂರೈಕೆ.. ನಗರ ನೀರು ಸರಬರಾಜು, ಒಳಚರಂಡಿ ಮಂಡಳಿಯಿಂದ ಟ್ರ್ಯಾಕ್ಟರ್ಗಳ ಮೂಲಕ ಮನೆ ಮನೆಗೂ ನೀರು ಪೂರೈಸಲಾಯಿತು. ಇಲ್ಲಿನ ಓವರ್ ಹೆಡ್ ಟ್ಯಾಂಕ್ನಲ್ಲಿ ನಿನ್ನೆ ಮಹಿಳೆಯ ಶವ ಪತ್ತೆಯಾಗಿತ್ತು. ಇದರಿಂದಾಗಿ ಟ್ಯಾಂಕರ್ ಶುಚಿಗೊಳಿಸುವ ಕಾರಣಕ್ಕಾಗಿ 9, 10, 11ನೇ ವಾರ್ಡ್ಗೆ ನೀರು ಪೂರೈಕೆಗೆ ವ್ಯತ್ಯಯವಾಗಿತ್ತು.
ನಿನ್ನೆ ವಿಷಯ ಗಮನಕ್ಕೆ ಬಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಜತೆ ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು ಮಾತನಾಡಿದ್ದರು. ಎಲ್ಲವೂ ಸರಿ ಹೋಗುವ ತನಕ ಯಾರೂ ಓವರ್ಹೆಡ್ ಟ್ಯಾಂಕ್ ನೀರನ್ನು ಬಳಸಬಾರದು. ನಿತ್ಯವೂ ಎಲ್ಲ ಮನೆಗಳಿಗೆ ಟ್ಯಾಂಕರ್ ನೀರನ್ನೇ ಪೂರೈಕೆ ಮಾಡಲಾಗುವುದು ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ 3 ವಾರ್ಡ್ನ ಜನರಿಗೆ ಟ್ಯಾಂಕರ್ಗಳಲ್ಲಿ ನೀರು ಪೂರೈಕೆ ಆಗುತ್ತಿದೆ. ಜತೆಗೆ ಅಷ್ಟೂ ವಾರ್ಡ್ಗಳಲ್ಲಿ ಈಗಾಗಲೇ ಪ್ರತ್ಯೇಕ ಬೋರ್ವೆಲ್ಗಳು ಸಹ ಕೊರೆಸಲಾಗಿದೆ. ಅಲ್ಲದೆ, ಮಹಿಳೆ ಶವ ಪತ್ತೆ ಬಗ್ಗೆ ಆದಷ್ಟು ಬೇಗ ತನಿಖೆ ಮಾಡಿ ಪ್ರಕರಣ ಭೇದಿಸುವಂತೆ ಕುಮಾರಸ್ವಾಮಿ ಅವರು ಪೊಲೀಸರಿಗೆ ಸ್ಪಷ್ಟ ಸೂಚನೆ ನೀಡಿದ್ದರು. ಅದರಂತೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಓದಿ:₹7.31 ಲಕ್ಷ ಮೌಲ್ಯದ ವಸ್ತುಗಳಿದ್ದ ಬ್ಯಾಗ್ ಮರೆತುಹೋಗಿದ್ದ ರೈಲ್ವೆ ಪ್ರಯಾಣಿಕ.. ಆಮೇಲೆ..