ಕರ್ನಾಟಕ

karnataka

ETV Bharat / state

ಟಿ-20 ವಿಶ್ವಕಪ್: ಭಾರತ ತಂಡಕ್ಕೆ ಶುಭ ಕೋರಿದ ರೇಷ್ಮೆನಗರಿ ಜನತೆ - ರಾಮನಗರ

ವರ್ಷಗಳ ತರುವಾಯ ಎರಡೂ ತಂಡಗಳು ತಮ್ಮ ಮೊದಲ ಪಂದ್ಯದಲ್ಲೇ ಮುಖಾಮುಖಿಯಾಗಿರುವುದು ಪ್ರೇಕ್ಷಕರ ರೋಚಕತೆ ಹೆಚ್ಚಾಗಿದೆ. ನಾಳೆ ಕೂಡ ಭಾರತ ವಿಜಯ ಶಾಲಿಯಾಗಲಿ‌ ಎಂದು ದೇವರಲ್ಲಿ ರೇಷ್ಮೆನಗರಿ ಜಿಲ್ಲೆಯ ಜನತೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ramanagar
ಭಾರತ ತಂಡಕ್ಕೆ ಶುಭ ಕೋರಿದ ರೇಷ್ಮೆನಗರಿ ಜನತೆ

By

Published : Oct 23, 2021, 7:47 PM IST

ರಾಮನಗರ:ಸಾಂಪ್ರಾದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ-20 ವಿಶ್ವಕಪ್ ಜಿದ್ದಾಜಿದ್ದಿನ ಪಂದ್ಯಕ್ಕೆ ರೇಷ್ಮೆನಗರಿ ಜಿಲ್ಲೆಯ ಜನತೆ ಶುಭ ಕೋರಿದ್ದಾರೆ.

ಭಾರತ ತಂಡಕ್ಕೆ ಶುಭ ಕೋರಿದ ರೇಷ್ಮೆನಗರಿ ಜನತೆ

ತೀವ್ರ ಕೂತೂಹಲ, ಕೌತುಕದಿಂದ ನಾಳೆ ನಡೆಯಲಿರುವ ಭಾರತ ಮತ್ತು ಪಾಕ್ ಹೈ ವೋಲ್ಟೇಜ್ ಪಂದ್ಯವನ್ನು ಎದುರು ನೋಡಲಾಗುತ್ತಿದೆ. ಪಂದ್ಯದಲ್ಲಿ ಭಾರತ ಮತ್ತು ಪಾಕ್​ ಮುಖಾಮುಖಿಯಾಗಲಿದ್ದು, ಇದುವರೆಗೂ ವಿಶ್ವಕಪ್ ಹಣಾಹಣಿಯಲ್ಲಿ ಭಾರತ ತಂಡ ಪಾಕಿಸ್ತಾನ ತಂಡದ ಎದುರು ಒಂದೂ ಪಂದ್ಯವನ್ನ ಕೂಡ ಸೋತ್ತಿಲ್ಲ.‌

ವರ್ಷಗಳ ತರುವಾಯ ಎರಡೂ ತಂಡಗಳು ತಮ್ಮ ಮೊದಲ ಪಂದ್ಯದಲ್ಲೇ ಮುಖಾಮುಖಿಯಾಗಿರುವುದು ಪ್ರೇಕ್ಷಕರ ರೋಚಕತೆ ಹೆಚ್ಚಾಗಿದೆ. ನಾಳೆ ಕೂಡ ಭಾರತ ವಿಜಯ ಶಾಲಿಯಾಗಲಿ‌ ಎಂದು ದೇವರಲ್ಲಿ ರೇಷ್ಮೆನಗರಿ ಜಿಲ್ಲೆಯ ಜನತೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ಟಿ-20 ವಿಶ್ವಕಪ್​ ಆರಂಭವಾಗಿದೆ. ಮೊದಲ ಸುತ್ತಿನಲ್ಲಿ ಅರ್ಹತಾ ಪಂದ್ಯಗಳು ನಡೆಯಲಿದ್ದು, ಇಂದಿನಿಂದ (ಅಕ್ಟೋಬರ್ 23) ಸೂಪರ್ 12 ಪಂದ್ಯಗಳು ಆರಂಭವಾಗಿವೆ. ಇದುವರೆಗೆ 6 ಬಾರಿ ಟಿ20 ವಿಶ್ವಕಪ್​ ನಡೆದಿದೆ. ಇದೀಗ 4 ವರ್ಷಗಳ 7ನೇ ಬಾರಿ ವಿಶ್ವಕಪ್​ ನಡೆಯುತ್ತಿರುವುದು ವಿಶೇಷ.

ABOUT THE AUTHOR

...view details