ರಾಮನಗರ: ನೈಜಿರಿಯಾ ಮೂಲದವರೆನ್ನಲಾದ ನಾಲ್ವರನ್ನು ರಾಮನಗರ ಜಿಲ್ಲಾ ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಮನಗರದಲ್ಲಿ ನೈಜಿರಿಯಾ ಮೂಲದ ನಾಲ್ವರ ಬಂಧನ - ರಾಮನಗರ ಜಿಲ್ಲಾ ಪೋಲೀಸರು
ನೈಜಿರಿಯಾ ಮೂಲದವರೆನ್ನಲಾದ ನಾಲ್ವರನ್ನು ರಾಮನಗರ ಜಿಲ್ಲಾ ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಭಯೋತ್ಪಾದಕರೆಂಬ ಶಂಕೆ: ನಾಲ್ವರು ನೈಜೀರಿಯನ್ನರ ಬಂಧನ
ಮೈಸೂರಿನಿಂದ ಸಿಸಿಬಿ ತಂಡ ಫಾಲೋ ಮಾಡಿದರೂ ಇವರನ್ನು ಬಂಧಿಸಲು ಸಾಧ್ಯವಾಗದ್ದಿದ್ದಾಗ ಬಳಿಕ ರಾಮನಗರದ ಕನಕಪುರ ಸರ್ಕಲ್ ಬಳಿ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ. ಶೆಟ್ಟಿ ನೇತೃತ್ವದ ತಂಡ ಇವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಸಂಬಂಧ ಎಸ್ಪಿ ಅನೂಪ್ ಎ. ಶೆಟ್ಟಿ ಕಾರ್ಯಾಚರಣೆ ನಡೆಸಿದ್ದು, ಬಂಧಿತರನ್ನು ರಾಮನಗರ ಗ್ರಾಮಾಂತರ ಪೊಲೀಸರ ವಶದಲ್ಲಿರಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.