ಕರ್ನಾಟಕ

karnataka

ETV Bharat / state

ಮೌಢ್ಯತೆಯ ಪರಮಾವಧಿ : ಹಸುಗೂಸು, ಬಾಣಂತಿಯ ಗ್ರಾಮದಿಂದ ಹೊರಗಿಟ್ಟ ಜನ - Baby and nursing mother kept outside from the Village

ಈ ಮೌಢ್ಯ ಆಚರಣೆ ಕೇವಲ ಬಾಣಂತಿಯರಿಗೆ ಮಾತ್ರವಲ್ಲ, ಋತುಮತಿಯಾದ ಹೆಣ್ಣಿಗೂ ಅನ್ವಯವಾಗಲಿದೆ. ಇವರಿಗಾಗಿ ಗ್ರಾಮದ ಹೊರಗೆ ಕೆಲವು ಕೊಠಡಿಗಳನ್ನು ನಿರ್ಮಿಸಿದ್ದಾರೆ. ಮತ್ತೆ ಕೆಲವರು ಮನೆಯ ಪಕ್ಕದಲ್ಲೇ ಗುಡಿಸಲು ನಿರ್ಮಿಸಿಕೊಂಡು ತಮ್ಮ ದಿನದ ಅವಧಿ ಮುಗಿಯುವವರೆಗೂ ಅವರು ಅಲ್ಲೇ ವಾಸವಿರಬೇಕು..

superstition-baby-and-nursing-mother-kept-outside-from-the-village
ಮೌಢ್ಯತೆಯ ಪರಮಾವಧಿ: ಹಸುಗೂಸು, ಬಾಣಂತಿಯ ಗ್ರಾಮದಿಂದ ಹೊರಗಿಟ್ಟ ಜನ

By

Published : May 28, 2022, 5:12 PM IST

ರಾಮನಗರ :ಆಧುನಿಕ ಜಗತ್ತು ಇಷ್ಟೊಂದು ಬೆಳೆದರು ಕೂಡ ಜನರು ಮೌಢ್ಯಕ್ಕೆ ದಾಸರಾಗುವುದು ಮಾತ್ರ ಇನ್ನೂ ನಿಂತಿಲ್ಲ. ಇಲ್ಲೊಂದು ಗ್ರಾಮಕ್ಕೆ ಕೇಡಾಗುತ್ತದೆ ಎಂದು ಹೆದರಿ 20 ದಿನದ ಹಸುಗೂಸು ಹಾಗೂ ಬಾಣಂತಿಯನ್ನು ಗ್ರಾಮದ ಹೊರಗಿಟ್ಟಿರುವ ಘಟನೆ ರಾಮನಗರ ತಾಲೂಕಿನ ದೇವರದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಹೊರವಲಯದ ಪ್ರದೇಶದಲ್ಲಿ ಮೌಢ್ಯತೆಯ ಅನಾವರಣವಾಗಿದೆ. ಇಲ್ಲಿ ತಲೆಮಾರುಗಳಿಂದಲೂ ಋತುಮತಿಯಾದವರು, ಬಾಣಂತಿಯರನ್ನು 20 ದಿನ ಊರ ಹೊರಗಿಡುತ್ತಾರೆ. ಗ್ರಾಮದ ಶ್ರೀರಂಗಪ್ಪ ದೇವರಿಗಾಗಿ ಈ ಮೌಢ್ಯತೆ ಆಚರಿಸಿಕೊಂಡು ಬರಲಾಗುತ್ತಿದೆ. ಉಲ್ಲಂಘಿಸಿದರೆ ಗ್ರಾಮಕ್ಕೆ ಕೇಡಾಗುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನರನ್ನು ಆವರಿಸಿದೆ.

ಮೌಢ್ಯತೆಯ ಪರಮಾವಧಿ : ಹಸುಗೂಸು, ಬಾಣಂತಿಯ ಗ್ರಾಮದಿಂದ ಹೊರಗಿಟ್ಟ ಜನ

ಈ ಮೌಢ್ಯ ಆಚರಣೆ ಕೇವಲ ಬಾಣಂತಿಯರಿಗೆ ಮಾತ್ರವಲ್ಲ, ಋತುಮತಿಯಾದ ಹೆಣ್ಣಿಗೂ ಅನ್ವಯವಾಗಲಿದೆ. ಇವರಿಗಾಗಿ ಗ್ರಾಮದ ಹೊರಗೆ ಕೆಲವು ಕೊಠಡಿಗಳನ್ನು ನಿರ್ಮಿಸಿದ್ದಾರೆ. ಮತ್ತೆ ಕೆಲವರು ಮನೆಯ ಪಕ್ಕದಲ್ಲೇ ಗುಡಿಸಲು ನಿರ್ಮಿಸಿಕೊಂಡು ತಮ್ಮ ದಿನದ ಅವಧಿ ಮುಗಿಯುವವರೆಗೂ ಅವರು ಅಲ್ಲೇ ವಾಸವಿರಬೇಕು.

ಈ ದೇವರದೊಡ್ಡಿ ಗ್ರಾಮದಲ್ಲಿ ಕೇವಲ 100 ರಿಂದ 139 ಮನೆಗಳಿವೆ. ರಾಜಧಾನಿಯಿಂದ ಕೇವಲ 45 ಕಿ.ಮೀ ದೂರವಿದೆ. ರಾಜಧಾನಿಯಲ್ಲಿ ಆಧುನಿಕತೆ ಅಬ್ಬರವಿದ್ದರೆ ಈ ಗ್ರಾಮದಲ್ಲಿ ಮೌಢ್ಯತೆ ಮನೆ ಮಾಡಿರೋದು ಸೋಜಿಗದ ಸಂಗತಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಮೌಢ್ಯತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯತೆ ಇದೆ.

ಇದನ್ನೂ ಓದಿ:ಮಹಿಳೆಯರ ಅಕಾಲಿಕ ಮೆನೊಪಾಸ್; ಕಾರಣ ಮತ್ತು ನಿರ್ವಹಣಾ ಕ್ರಮಗಳು

ABOUT THE AUTHOR

...view details