ಕರ್ನಾಟಕ

karnataka

ETV Bharat / state

ಬಿಡದಿಯಲ್ಲಿ ರಾಜ್ಯದ ಪ್ರಥಮ ತ್ಯಾಜ್ಯ ಇಂಧನ ಘಟಕ ಆರಂಭ: ಇಂಧನ ಸಚಿವ ಜಾರ್ಜ್ - ಕೆಪಿಸಿಎಲ್ ಘಟಕ

ಇಂಧನ ಸಚಿವ ಜಾರ್ಜ್ ಕೆಪಿಸಿಎಲ್ ಘಟಕ ಪರಿಶೀಲಿಸಿ ರಾಜ್ಯದಲ್ಲಿ ಪ್ರಥಮ ಬಾರಿಗೆ ತ್ಯಾಜ್ಯ ಇಂಧನ ಘಟಕವನ್ನು ಬಿಡದಿಯಲ್ಲಿ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

Energy Minister George visits KPCL unit
ಇಂಧನ ಸಚಿವ ಜಾರ್ಜ್ ಕೆಪಿಸಿಎಲ್ ಘಟಕಕ್ಕೆ ಭೇಟಿ

By

Published : Aug 10, 2023, 10:21 AM IST

ರಾಮನಗರ:ರಾಜ್ಯದಲ್ಲಿ ಪ್ರಥಮ ಬಾರಿಗೆ ತ್ಯಾಜ್ಯ ಇಂಧನ ಘಟಕವನ್ನು ಬಿಡದಿಯಲ್ಲಿ ಆರಂಭಿಸಲಾಗುವುದು ಎಂದು ಇಂಧನ ಸಚಿವ ಜಾರ್ಜ್ ತಿಳಿಸಿದರು. ಬುಧವಾರ ಬಿಡದಿ ಬಳಿಯ ಕೆಪಿಸಿಎಲ್ ಘಟಕ ಪರಿಶೀಲಿಸಿ ಮಾತನಾಡಿದರು. ಪ್ರಥಮ ಬಾರಿಗೆ ರಾಜ್ಯದಲ್ಲಿ ತಾಜ್ಯ ಇಂಧನ ಘಟಕ ಬಿಡದಿಯ ಇಂಡಸ್ಟ್ರಿಯಲ್​ ಏರಿಯಾದಲ್ಲಿ ನಿರ್ಮಾಣವಾಗುತ್ತಿದೆ. ಅಕ್ಟೋಬರ್ ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದರು.

ಸುಮಾರು 15 ಎಕರೆ‌ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳುತ್ತಿದೆ. ಇದು ಸುಮಾರು 280 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. 600 ಟನ್ ಸಾಮರ್ಥ್ಯ ಇರೋ ಇಂಧನ ಘಟಕ ಇದಾಗಿದೆ. ಇಲ್ಲಿ 11.5 ಮೆಗಾ ವ್ಯಾಟ್ ಪವರ್ ಉತ್ಪಾದನೆಯಾಗುತ್ತದೆ ಎಂದು ತಿಳಿಸಿದರು.

ಇಂಧನ ಸಚಿವ ಜಾರ್ಜ್ ಕೆಪಿಸಿಎಲ್ ಘಟಕಕ್ಕೆ ಭೇಟಿ

ಪ್ರತಿ ದಿನ ಬೆಂಗಳೂರಿನಲ್ಲಿ 6 ಸಾವಿರ ಟನ್ ಕಸ ಉತ್ಪಾದನೆಯಾಗುತ್ತದೆ. ಏಳು ಪ್ಲಾಂಟ್​ನಲ್ಲಿ ಹಸಿ ಕಸವನ್ನು ಕಂಪ್ರೆಸ್ ಮಾಡಲಾಗುತ್ತಿದೆ. ಬಂಡೂರು, ಟೆರಾಫಾರಂನಲ್ಲಿ ಅವೈಜ್ಞಾನಿಕವಾಗಿ ಕಸ ಸುರಿಯಲಾಗುತ್ತಿತು ಎಂದರು. ಈ ಹಿಂದೆ ನಾನು ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿದ್ದ ವೇಳೆ ಈ ಬಗ್ಗೆ ಚಿಂತಿಸಲಾಗಿತ್ತು. ನಂತರ ವಿದೇಶಿ ಪ್ರವಾಸ ಮಾಡಿ ಅಲ್ಲಿನ ರಾಜ್ಯ ಇಂಧನ ಘಟಕಗಳನ್ನು ಪರಿಶೀಲಿಸಲಾಗಿತ್ತು. ಈಗ ಬಿಬಿಎಂ, ಕೆಪಿಟಿಸಿಎಲ್ ಒಂದಿಗೆ ಸ್ಥಾವರ ನಿರ್ಮಿಸುತ್ತಿದ್ದೆವೆ. ವಿದೇಶಿ ತ್ಯಾಜ್ಯ ವಿದ್ಯುತ್ ಘಟಕಕ್ಕಿಂತಲೂ ಇನ್ನು ಚೆನ್ನಾಗಿ ಘಟಕವನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಇಲ್ಲಿ ಕಸದ ವಾಸನೆ ಬರುವುದಿಲ್ಲ. ಪ್ರಾಯೋಗಿಕವಾಗಿ ಒಂದು ಸ್ಥಾವರಕ್ಕೆ ಆರಂಭವಾಗಲಿದೆ. ವಿದ್ಯುತ್ ಉತ್ಪಾದನಾ‌ ಸಾಮರ್ಥ್ಯ ತಿಳಿದು ಮತ್ತಷ್ಟು ಸ್ಥಾವರ ನಿರ್ಮಾಣ ಮಾಡುವ ಯೋಜನೆ‌ ಇದೆ. ಎಲ್ಲ ಜಿಲ್ಲೆಯ ಕಸದ ಸಮಸ್ಯೆಯನ್ನು ಈ ರೀತಿ ನಿವಾರಣೆ ಆಗುತ್ತದೆ ಎಂದು ತಿಳಿಸಿದರು. ಹಾಗೆಯೇ ಪ್ರತಿ ಯುನಿಟ್​ಗೆ 8 ರೂ ಖರ್ಚಾಗಲಿದೆ. ಪ್ರತಿದಿನ 2.76 ಲಕ್ಷ ಯೂನಿಟ್ ಉತ್ಪಾದನೆಯಾಗಲಿದೆ. ಇದು ಪೈಲೆಟ್ ಪ್ರಾಜೆಕ್ಟ್ ಆಗಿ ಮಾಡಿದ್ದಾರೆ. ಸ್ಥಳೀಯ ಕಸಕ್ಕೂ ಅವಕಾಶ ನೀಡಲಾಗುವುದು ಎಂದು ಇಂಧನ ಸಚಿವರು ತಿಳಿಸಿದರು.

ಇಂಧನ ಸಚಿವ ಜಾರ್ಜ್ ಕೆಪಿಸಿಎಲ್ ಘಟಕಕ್ಕೆ ಭೇಟಿ

ಆರೋಪಗಳನ್ನು ಮಾಡುವುದರಲ್ಲಿ ಹೆಚ್​.ಡಿ.ಕುಮಾರಸ್ವಾಮಿ ನಿಸ್ಸೀಮರು: ಕೃಷಿ ಸಚಿವ ಚಲುವರಾಯಸ್ವಾಮಿ ಅವರ ವಿರುದ್ಧ ಲಂಚದ ಆರೋಪ ಮಾಡಿರುವವರು ಸಾಕ್ಷ್ಯ ನೀಡಬೇಕು. ಸುಮ್ಮನೆ ಆರೋಪ ಮಾಡಿ ಸುಮ್ಮನಾಗುವುದು ಸುಲಭ. ಅದನ್ನು ನಿರೂಪಿಸುವ ಸಾಕ್ಷ್ಯ ಒದಗಿಸಬೇಕು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಟಾಂಗ್​ ನೀಡಿದ್ದಾರೆ.

ಬಿಡದಿಯಲ್ಲಿ ಮಾತನಾಡಿದ ಅವರು ತಮ್ಮ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ ಎಂದು ಚಲುವರಾಯಸ್ವಾಮಿ ಅವರು ಅಧಿವೇಶನದಲ್ಲೇ ಹೇಳಿದ್ದಾರೆ. ಆರೋಪ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆ. ಹಾಗೆಯೇ ಹೆಚ್​.ಡಿ.ಕುಮಾರಸ್ವಾಮಿ ಅವರು ಆರೋಪಗಳನ್ನು ಮಾಡುವುದರಲ್ಲಿ ನಿಸ್ಸೀಮರು. ಅವರು ಎಂದಾದರೂ ಸಾಬೀತು ಮಾಡಿದ್ದಾರಾ? ತಮ್ಮ ಪೆನ್ ಡ್ರೈವ್‌ನಲ್ಲಿ ಏನಿದೆ ಎಂಬುದನ್ನು ಇದುವರೆಗೆ ತೋರಿಸಿಲ್ಲ. ಸಿದ್ದರಾಮಯ್ಯ ಅವರನ್ನು ಲಜ್ಜೆಗೆಟ್ಟ ಸಿಎಂ ಎಂದಿರುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಇದಲ್ಲದೇ ಹಿಂದಿನ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್​ ಪಡೆಯುತ್ತಿದೆ ಎಂದು ಹೇಳಿದ್ದು ಗುತ್ತಿಗೆದಾರರೇ ಹೊರತು ನಾವಲ್ಲ. ಆಗ ಅಧಿಕಾರದಲ್ಲಿದ್ದ ಬಿಜೆಪಿಯವರು ಆರೋಪದ ಕುರಿತು ತನಿಖೆ ಮಾಡಬಹುದಾಗಿತ್ತು. ಆದರೆ, ಮಾಡಲಿಲ್ಲ. ನಮ್ಮ ಸರ್ಕಾರ ಆ ಕುರಿತು ತನಿಖೆಗೆ ನಿರ್ಣಯಿಸಿದ್ದು ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಇದೇ ವೇಳೆ ತಿಳಿಸಿದರು. ಇದೇ ಸಂದರ್ಭದಲ್ಲಿ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಪಂಕಜ್ ಕುಮಾರ್ ಪಾಂಡೆ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ರಾಮನಗರ ಬೆಸ್ಕಾ ಮುಖ್ಯ ಅಧ್ಯಕ್ಷರಾದ ಶಿವಪ್ಪ ಹಾಗೂ ಮುಂತಾದ ಅಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ:ಇನ್ನಷ್ಟು ಜನಸ್ನೇಹಿ ಆಗಲಿದೆ ನಮ್ಮ ಕ್ಲಿನಿಕ್​.. ರಾತ್ರಿ 8 ಗಂಟೆವರೆಗೂ ಓಪನ್​ ಇರುವಂತೆ ಆದೇಶ

ABOUT THE AUTHOR

...view details