ಕರ್ನಾಟಕ

karnataka

ETV Bharat / state

ಮತ್ತೆ 'ಕೈ' ಹಿಡಿಯಲ್ಲ, ಬಿಜೆಪಿಯಲ್ಲೇ ಇರ್ತೀನಿ: ಎಸ್.ಟಿ.ಸೋಮಶೇಖರ್ - ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ನ್ಯೂಸ್​

ನಾವು ಮತ್ತೆ ಕಾಂಗ್ರೆಸ್​​ ಸೇರಲ್ಲ. ನಾವು ಪಕ್ಷ ಬಿಟ್ಟಿರಲಿಲ್ಲ, ಅವರೇ ನಮ್ಮನ್ನು ಹೊರ ಹಾಕಿದ್ದಾರೆ. 100ಕ್ಕೆ 100 ಬಿಜೆಪಿಯಲ್ಲೇ ಇರುತ್ತೇನೆ ಎಂದು ಎಸ್.ಟಿ.ಸೋಮಶೇಖರ್, ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ರು.

ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ‌ ಎಸ್.ಟಿ.ಸೋಮಶೇಖರ್
S.T somashekar speak about siddaramayya

By

Published : Mar 2, 2020, 3:29 AM IST

ರಾಮನಗರ: ಬಜೆಟ್ ಅಧಿವೇಶನವನ್ನು ವಿರೋಧ ಮಾಡಬಾರದು, ಯಾವುದೇ ಸಮಸ್ಯೆ ಇದ್ದರೂ ಅಧಿವೇಶದಲ್ಲಿ ಬಂದು ಚರ್ಚೆ ಮಾಡಲಿ ಅಂತ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ರು.

ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ‌ ಎಸ್.ಟಿ.ಸೋಮಶೇಖರ್

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಶಟ್ಟಿಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ‌ ಅವರು, ಬಜೆಟ್​ಗೆ ಹೋಗದೇ ಬಹಿಷ್ಕಾರ ಮಾಡೊದ್ರಿಂದ ಏನೂ ಪ್ರಯೋಜನವಾಗಲ್ಲ, ವಿರೋಧ ಪಕ್ಷದ ನಾಯಕರಿಗೆ 3-4 ಗಂಟೆ ಕಾಲಾವಕಾಶ ಕೊಡುತ್ತಾರೆ, ಅಸೆಂಬ್ಲಿಯಲ್ಲಿಯೇ ಪ್ರತಿಭಟನೆ ಹಾಗೂ ಸರ್ಕಾರಕ್ಕೆ ಚಾಟಿ ಬೀಸಲಿ ಅಂತ ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಮರಳುವ ವಿಚಾರವಾಗಿ ಪ್ರತಿಕ್ರಿಯಿಸಿದ ಸೋಮಶೇಖರ್, ನಾವು ಮತ್ತೆ ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ, ಪಕ್ಷದಿಂದ ನಾವು ಹೊರಗಡೆ ಹೋಗುತ್ತವೆ ಅಂತ ಹೇಳಿರಲಿಲ್ಲ, ಪಕ್ಷದಿಂದ ಅವರೇ ಹೊರಗೆ ಹಾಕಿದ್ರಿಂದ ಮತ್ತೆ ಕಾಂಗ್ರೆಸ್​ಗೆ ಹೋಗುವ ಪ್ರಮೆಯವೇ ಇಲ್ಲ ಅಂತ ಸ್ಪಷ್ಟಪಡಿಸಿದ್ರು. ಬಿಜೆಪಿ ಅಹ್ವಾನ ಕೊಟ್ಟಿದೆ, ಬಿಜೆಪಿಯಿಂದ ಶಾಸಕಾಗಿ ಆಯ್ಕೆ ಕೂಡ ಆಗಿದ್ದೇನೆ, ಅದೇ ಬಿಜೆಪಿ ಸರ್ಕಾರದಲ್ಲಿ ಸಹಕಾರ ಮಂತ್ರಿಯಾಗಿದ್ದೇನೆ, ಇಂತಹ ಸಮಯದಲ್ಲಿ ಮತ್ತೆ ಕಾಂಗ್ರೆಸ್​ಗೆ ಮರಳ ಇಲ್ಲ, ಯಾವ ಹೈಕಮಾಂಡ್ ಹೇಳಿದ್ರು ಅಷ್ಟೆ, ಯಾರು ಹೇಳಿದ್ರು ಅಷ್ಟೆ, 100 ಕ್ಕೆ 100 ಬಿಜೆಪಿ ಪಕ್ಷದಲ್ಲೇ ಇರುತ್ತೇನೆ ಅಂತ ಸ್ಪಷ್ಟಪಡಿಸಿದರು.

ಇನ್ನು ನನಗೆ ಯಾವ ಜಿಲ್ಲೆಯ ಉಸ್ತುವಾರಿ ಕೊಡುತ್ತಾರೆ ಅಂತಾ ಗೊತ್ತಿಲ್ಲ, ಯಾವ ಜಿಲ್ಲೆ ಕೊಟ್ರು ಕೆಲಸ ಮಾಡುತ್ತೇನೆ, ಸಹಕಾರ ಕ್ಷೇತ್ರದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೇನೆ, ನಾನು ರಾಮನಗರ ಜಿಲ್ಲೆಯನ್ನು ಉಸ್ತುವಾರಿ ಕೊಡಿ ಅಂತ ಕೇಳಿಲ್ಲ, ನಾನು ಆಕಾಂಕ್ಷಿಯೂ ಅಲ್ಲ ಅಂತ ಎಸ್.ಟಿ.ಸೋಮಶೇಖರ್ ತಿಳಿಸಿದರು.

ABOUT THE AUTHOR

...view details