ಕರ್ನಾಟಕ

karnataka

ETV Bharat / state

ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣ: ಠಾಣೆಗೆ ಹಾಜರಾದ ಪೋಷಕರು - actress Sowjanya

ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪೋಷಕರು ಕೂಡ ಠಾಣೆಗೆ ಹಾಜರಾಗಿ ಮಗಳ ಸಾವಿನ ಬಗ್ಗೆ ಅನುಮಾನ ಹೊರಹಾಕಿದ್ದಾರೆ.

Sowjanya Parents attend police station
ಸೌಜನ್ಯ ಆತ್ಮಹತ್ಯೆ ಪ್ರಕರಣ; ಠಾಣೆಗೆ ಹಾಜರಾದ ಪೋಷಕರು

By

Published : Sep 30, 2021, 8:35 PM IST

Updated : Sep 30, 2021, 9:28 PM IST

ರಾಮನಗರ: ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂಬಳಗೂಡು ಪೊಲೀಸ್ ಠಾಣೆಗೆ ನಟಿಯ ಪೋಷಕರು ಹಾಜರಾಗಿದ್ದಾರೆ.

ಪೋಷಕರೊಂದಿಗೆ ಸೌಜನ್ಯ

ಸೌಜನ್ಯ ತಂದೆ ಪ್ರಭು ಮಾದಪ್ಪ, ತಾಯಿ ಹಾಗೂ ಸಂಬಂಧಿಕರು ಆಗಮಿಸಿದ್ದು, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ನಟಿ ಸೌಜನ್ಯ

ಇದನ್ನೂ ಓದಿ: Actress Soujanya suicide: ಸೌಜನ್ಯ ಸಿನಿ ಇಂಡಸ್ಟ್ರಿಗೆ ಬಂದಿದ್ದು ಹೇಗೆ, ಹಿನ್ನೆಲೆ ಏನು?

ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ:

ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡಬೆಲೆ ಗ್ರಾಮದ ಅಪಾರ್ಟ್​ಮೆಂಟ್​ನಲ್ಲೇ ನಟಿ ಆತ್ಮಹತ್ಯೆಗೆ ಶರಣಾಗಿದ್ದರು. ಇಂಗ್ಲಿಷ್​ನಲ್ಲಿ ಬರೆದಿರುವ ​4 ಪುಟದ ಡೆತ್​ನೋಟ್​​ ಪತ್ತೆಯಾಗಿದ್ದು, 'ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ. ನಾನು ನಿಮ್ಮಿಬ್ಬರನ್ನೂ ತುಂಬಾ ಪ್ರೀತಿಸುವೆ. ಸದ್ಯ ನನ್ನ ಮನಸ್ಥಿತಿ ಸರಿ ಇಲ್ಲ. ಅನಾರೋಗ್ಯ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ನಾನು ಸಾವಿನ ಮನೆಗೆ ಹೋಗುತ್ತಿದ್ದೇನೆ, ಕ್ಷಮಿಸಿ' ಎಂದಿರುವ ಅವರು, ಸ್ನೇಹಿತರು ಮತ್ತು ಸಹೋದರರ ಹೆಸರನ್ನೂ ಬರೆದಿದ್ದಾರೆ.

ಠಾಣೆಗೆ ಹಾಜರಾದ ಪೋಷಕರು

ಸೌಜನ್ಯ ಮೂಲತಃ ಕೊಡಗು ಜಿಲ್ಲೆ ಕುಶಾಲನಗರ ಮೂಲದವರಾಗಿದ್ದಾರೆ.

ಈ ಸಂಬಂಧ ರಾಮನಗರ ಎಸ್​ಪಿ ಎಸ್.ಗಿರೀಶ್​ ಮಾತನಾಡಿ, ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಆಕೆ ಪತ್ತೆಯಾಗಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ. ಹಾಗೆ ಡೆತ್​ನೋಟ್​ಗಳನ್ನು ವಶಪಡಿಸಿಕೊಂಡಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

Last Updated : Sep 30, 2021, 9:28 PM IST

ABOUT THE AUTHOR

...view details