ಕರ್ನಾಟಕ

karnataka

ETV Bharat / state

ತನ್ನ ಹೆಸರಿಗೆ ಮನೆ ಬರೆದುಕೊಡುವಂತೆ ಪೀಡಿಸಿ ತಂದೆಯನ್ನೇ ಮನೆಯಿಂದ ಹೊರಗೆಸೆದ KSRTC ಚಾಲಕ: ರಾಮನಗರದಲ್ಲಿ ಮನಕಲಕುವ ಘಟನೆ! - ರಾಮನಗರದಲ್ಲಿ ಆಸ್ತಿಗಾಗಿ ಮಗ-ತಂದೆ ನಡುವೆ ಜಗಳ

ತಂದೆ ತಾಯಿ ತಾವು ಉಪವಾಸವಿದ್ದರೂ ತಮ್ಮ ಮಕ್ಕಳನ್ನು ಪ್ರೀತಿಯಿಂದ ಸಾಕಿ, ಉತ್ತಮವಾದ ಭವಿಷ್ಯವನ್ನು ಕಟ್ಟಿಕೊಡಲು ನಾನಾ ರೀತಿಯಲ್ಲಿ ಕಷ್ಟಗಳನ್ನು ಅನುಭವಿಸುತ್ತಾರೆ. ಆದರೆ ಇಲೊಬ್ಬ ಪಾಪಿ ಪುತ್ರ ಆಸ್ತಿಗಾಗಿ ಜಗಳವಾಡಿ ಹೆತ್ತ ತಂದೆಯನ್ನೇ ಮನೆಯಿಂದ ಎತ್ತಿ ಹೊರ ಎಸೆದಿರುವ ಅಮಾನವೀಯ ಘಟನೆ ನಡೆದಿದೆ.

ತಂದೆಯನ್ನು ಮನೆಯಿಂದ ಎತ್ತಿ ಎಸೆದ ಕ್ರೂರಿ ಮಗ
Son beating his father for property matters

By

Published : Jul 8, 2021, 3:59 PM IST

Updated : Jul 8, 2021, 7:24 PM IST

ರಾಮನಗರ:ಆಸ್ತಿಗಾಗಿ ಜಗಳವಾಡಿ ಜನ್ಮ ನೀಡಿದ ತಂದೆಯನ್ನೇ ಪಾಪಿ ಮಗನೊಬ್ಬ ಮನೆಯಿಂದ ಎತ್ತಿ ಹೊರಗೆಸೆದಿರುವ ಅಮಾನವೀಯ ಘಟನೆ ರಾಮನಗರದ ಸಿಂಗ್ರಿಬೋವಿದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಮಾನವೀಯತೆ ಮರೆತ ಪಾಪಿ ಮಗ

ಕೆಎಸ್​​ಆರ್​​ಟಿಸಿ ಬಸ್ ಚಾಲಕ ಕುಮಾರ್ ಎಂಬಾತ ತನ್ನ ತಂದೆ ತಿಮ್ಮಯ್ಯನನ್ನು ಮನೆಯಿಂದ ಹೊರಹಾಕಿದ್ದಾನೆ. ಮನೆಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ತಂದೆಗೆ ಹಿಂಸೆ ನೀಡುತ್ತಿದ್ದನಂತೆ. ಇದಕ್ಕೆ‌ ತಿಮ್ಮಯ್ಯ ನಿರಾಕರಿಸಿದ್ದಾರೆ. ಇದರಿಂದ ಕುಪಿತಗೊಂಡ ಮಗ ಕುಮಾರ್‌ ತಂದೆಯನ್ನೇ ಮನೆಯಿಂದ ಎತ್ತಿ ಎಸೆದಿದ್ದಾನೆ.

ಇದನ್ನೂಓದಿ: ಭ್ರಷ್ಟಾಚಾರ ಆರೋಪದಡಿ ಪ್ರಕರಣ ದಾಖಲಿಸುವಂತೆ ಕೋರಿದ್ದ ಅರ್ಜಿ ವಜಾ: ಬಿಎಸ್​ವೈಗೆ ಬಿಗ್​ ರಿಲೀಫ್

ಕ್ರೌರ್ಯ ಮೆರೆದ ಮಗನ ಕೃತ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಗನ ದುರ್ವರ್ತನೆಗೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗಿದೆ. ಇದೀಗ ತಿಮ್ಮಯ್ಯ ಬೇರೆಯವರ ಆಶ್ರಯದಲ್ಲಿದ್ದಾರೆ.

Last Updated : Jul 8, 2021, 7:24 PM IST

ABOUT THE AUTHOR

...view details