ರಾಮನಗರ: ಕಂಕಣ ಸೂರ್ಯಗ್ರಹಣದ ಬಳಿಕ ಹಾವುಗಳು ಸರಸ ಸಲ್ಲಾಪದಲ್ಲಿ ತೊಡಗಿದ್ದ ದೃಶ್ಯ ಈಗ ವೈರಲ್ ಆಗಿದೆ.
ಅರ್ಚಕರಹಳ್ಳಿಯಲ್ಲಿ ಹಾವುಗಳ ಸರಸ-ಸಲ್ಲಾಪ: ವಿಡಿಯೋ ವೈರಲ್ - snake romance in ramnagar
ಕಂಕಣ ಸೂರ್ಯಗ್ರಹಣದ ಬಳಿಕ ಹಾವುಗಳೆರಡು ಸರಸ ಸಲ್ಲಾಪದಲ್ಲಿ ತೊಡಗಿದ್ದ ದೃಶ್ಯ ರಾಮನಗರ ಜಿಲ್ಲೆಯಲ್ಲಿ ಕಂಡು ಬಂದಿದೆ. ಹಾವುಗಳ ಈ ಸಲ್ಲಾಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
![ಅರ್ಚಕರಹಳ್ಳಿಯಲ್ಲಿ ಹಾವುಗಳ ಸರಸ-ಸಲ್ಲಾಪ: ವಿಡಿಯೋ ವೈರಲ್ snakes romance viral video](https://etvbharatimages.akamaized.net/etvbharat/prod-images/768-512-7717677-thumbnail-3x2-snake.jpg)
ವಿಡಿಯೋ ವೈರಲ್
ಹಾವುಗಳ ನರ್ತನ ವಿಡಿಯೋ ವೈರಲ್
ನಗರದ ಹೊರವಲಯದಲ್ಲಿನ ಅರ್ಚಕರಹಳ್ಳಿಯ ಯೂನಿವರ್ಸಲ್ ಶಾಲೆ ಬಳಿ ಎರಡು ಹಾವುಗಳು ಸಲ್ಲಾಪದಲ್ಲಿ ತೊಡಗಿ ನರ್ತಿಸುವ ದೃಶ್ಯ ಕಂಡು ಸಾರ್ವಜನಿಕರು ನಿಬ್ಬೆರಗಾಗಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಹಾವುಗಳು ಸರಸವಾಡಿವೆ ಎಂದು ಸ್ಥಳೀಯರೊಬ್ಬರು ಆ ದೃಶ್ಯವನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.
ಸುಮಾರು ಹತ್ತು ಅಡಿ ಉದ್ದದ ಈ ಹಾವುಗಳು ಹಸಿರು ಗಿಡಗಳ ನಡುವೆ ನರ್ತನ ಮಾಡಿವೆ.
Last Updated : Jun 22, 2020, 12:42 PM IST