ರಾಮನಗರ: ರೇಷ್ಮೆ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ರೀಲರ್ಸ್ಗಳು ಸಾಮೂಹಿಕ ಬಹಿಷ್ಕಾರ ಹಾಕಿದ ಪರಿಣಾಮ ನಗರದ ಮಾರುಕಟ್ಟೆಗೆ ರೇಷ್ಮೆ ತಂದಿದ್ದ ರೈತರು ಕೆಲ ಕಾಲ ಆತಂಕಕ್ಕೆ ಒಳಗಾದರು.
ರೇಷ್ಮೆ ಕೊಳ್ಳಲು ರೀಲರ್ಸ್ ಹಿಂದೇಟು: ರಾಮನಗರ ಮಾರುಕಟ್ಟೆಯಲ್ಲಿ ರೈತರ ಪ್ರತಿಭಟನೆ - Reellers' refusal to buy silk
ರೇಷ್ಮೆ ಕೊಳ್ಳಲು ರೀಲರ್ಸ್ ಹಿಂದೇಟು ಹಾಕಿದ ಪರಿಣಾಮ ರಾಮನಗರ ಮಾರುಕಟ್ಟೆಗೆ ರೇಷ್ಮೆ ತಂದ ರೈತರು ಪ್ರತಿಭಟನೆ ನಡೆಸಿ, ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ಒತ್ತಾಯಿಸಿದರು.
ಲಾಕ್ ಡೌನ್ನಿಂದಾಗಿ ರೇಷ್ಮೆ ಕೊಂಡು ಕೊಳ್ಳಲಾಗದ ಪರಿಸ್ಥಿತಿ ಎದುರಾಗಿದ್ದು, ಸರ್ಕಾರ ಕೂಡ ನೆರವಾಗುತ್ತಿಲ್ಲ ಎಂದು ಆರೋಪಿಸಿ ರೇಷ್ಮೆ ರೀಲರ್ಸ್ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಬಹಿಷ್ಕಾರ ಹಾಕಿದ್ದರು. ಇದರಿಂದ ರೇಷ್ಮೆ ಬೆಳೆಗಾರರು ಮಾರುಕಟ್ಟೆಗೆ ರೇಷ್ಮೆ ತಂದು ಸಂಕಷ್ಟಕ್ಕೆ ಸಿಲುಕಿದ್ದರು. ರೇಷ್ಮೆ ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ಹಲವು ಭಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಬೇಸತ್ತ ರೈತರು, ಬೆಂಗಳೂರು-ಮೈಸೂರು ರಸ್ತೆ ತಡೆ ನಡೆಸಿ ಪ್ರತಿಭಟನೆ ಆರಂಭಿಸಿದರು. ಅಲ್ಲದೆ ರೇಷ್ಮೆ ಗೂಡುಗಳನ್ನು ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪೊಲೀಸರು ರೈತರ ಮನವೊಲಿಕೆ ಪ್ರಯತ್ನಪಟ್ಟರು ಸಾಧ್ಯವಾಗಿಲ್ಲ. ಕೊನೆಗೆ ಸದ್ಯದ ಪರಿಸ್ಥಿತಿಯ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಟ್ಟು ಪ್ರತಿಭಟನಾ ನಿರತರನ್ನು ತೆರವುಗೊಳಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾದರು.