ಕರ್ನಾಟಕ

karnataka

ETV Bharat / state

ಮುತ್ತಪ್ಪ ರೈ ಅಂತ್ಯಕ್ರಿಯೆ ವೇಳೆ ಗಾಳಿಯಲ್ಲಿ ಗುಂಡು...ಏಳು ಜನರ ಬಂಧನ - Muthappa Rai funeral

ಬಿಡದಿಯಲ್ಲಿ ನಡೆದ ಮುತ್ತಪ್ಪ ರೈ ಅಂತ್ಯಕ್ರಿಯೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಲಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಆಯೋಜಕ ಪ್ರಕಾಶ್ ರೈ ಸೇರಿ ಏಳು ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.

Seven persons arrested for shooting at Muthappa Rai's funeral
ಮುತ್ತಪ್ಪ ರೈ ಅಂತ್ಯಕ್ರಿಯೆ ವೇಳೆ ಗುಂಡು...ಏಳು ಜನರ ಬಂಧನ

By

Published : May 16, 2020, 7:40 AM IST

ರಾಮನಗರ: ಬಿಡದಿಯಲ್ಲಿ ನಡೆದ ಮುತ್ತಪ್ಪ ರೈ ಅಂತ್ಯಕ್ರಿಯೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಈ ಸಂದರ್ಭದಲ್ಲಿ ಆಯೋಜಕರು ಕಾನೂನು ಉಲ್ಲಂಘನೆ ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿ ಬಿಡದಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್ ಎ.ಶೆಟ್ಟಿ

ನಿನ್ನೆ ಕ್ಯಾನ್ಸರ್‌ನಿಂದಾಗಿ ಮೃತಪಟ್ಟ ಮಾಜಿ ಡಾನ್ ಮುತ್ತಪ್ಪ ರೈ ಅಂತ್ಯಕ್ರಿಯೆಯನ್ನ ಬಿಡದಿಯ ಅವರ ನಿವಾಸದ ಬಳಿ ನಡೆಸಲಾಯಿತು. ಈ ವೇಳೆ ಗುಂಡು ಹಾರಿಸಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಬಿಡದಿ ಠಾಣೆಯಲ್ಲಿ ಗುನ್ನೆ ಸಂಖ್ಯೆ 135/20 ರಲ್ಲಿ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು,ಆಯೋಜಕ ಪ್ರಕಾಶ್ ರೈ ಸೇರಿ ಏಳು ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.

ಅಲ್ಲದೆ, ಅವರು ಬಳಸಿದ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದ್ದು,ಬಂಧಿತರಾದ ಮೋನಪ್ಪ, ಗಿರೀಶ್. ಲಕ್ವಿರ್ ಸಿಂಗ್, ಚಾತರ್ ಸಿಂಗ್, ರಂಜಿತ್ ರೈ, ಸುನಿಲ್, ಪ್ರಕಾಶ್ ರೈ ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ABOUT THE AUTHOR

...view details