ದೊಡ್ಡಬಳ್ಳಾಪುರ/ರಾಮನಗರ:ಕೊರೊನಾ ಹಿನ್ನೆಲೆ ಬಂದ್ ಆಗಿದ್ದ ಶಾಲಾ-ಕಾಲೇಜುಗಳು ಇಂದಿನಿಂದ ಪುನಾರಂಭವಾಗಿವೆ. ಈ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ನಗರದ ಶ್ರೀಕೊಂಗಾಡಿಯಪ್ಪ ಪ್ರೌಢ ಶಾಲೆಯ ಮಕ್ಕಳನ್ನು ತಮಟೆ ಬಾರಿಸಿ ಪೂರ್ಣಕುಂಭ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.
ಶಾಲೆಗಳು ಪುನಾರಂಭ: ಪೂರ್ಣಕುಂಭ ಮೆರವಣಿಗೆ ಮೂಲಕ ಮಕ್ಕಳಿಗೆ ಅದ್ಧೂರಿ ಸ್ವಾಗತ
ಇಂದಿನಿಂದ ಶಾಲೆ ಕಾಲೇಜುಗಳು ಪುನಾರಂಭವಾಗಿದ್ದು, ದೊಡ್ಡಬಳ್ಳಾಪುರ ನಗರದ ಶ್ರೀಕೊಂಗಾಡಿಯಪ್ಪ ಪ್ರೌಢ ಶಾಲೆಯ ಮಕ್ಕಳನ್ನು ತಮಟೆ ಬಾರಿಸಿ ಪೂರ್ಣಕುಂಭ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.
ಒಂದೂವರೆ ವರ್ಷದ ನಂತರ ಹೈಸ್ಕೂಲ್ಗಳಲ್ಲಿ ಭೌತಿಕ ತರಗತಿಗಳು ಪ್ರಾರಂಭವಾಗಿದೆ. ಶಾಲೆಯಲ್ಲಿ ಹಬ್ಬದ ವಾತಾವರಣ ಇದ್ದು ರಂಗೋಲಿ ಹಾಕಿ ಅಲಂಕರಿಸಲಾಗಿತ್ತು. ಬಾಗಿಲುಗಳಿಗೆ ತೋರಣ ಕಟ್ಟಿ ಮಕ್ಕಳ ಆಗಮನವನ್ನು ಹಬ್ಬದಂತೆ ಆಚರಿಸಲಾಯಿತು. ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಟೆಂಪರೇಚರ್ ಪರಿಶೀಲಿಸಿ ಬಳಿಕ ಸ್ಯಾನಿಟೈಸರ್ ನೀಡಿ ಕೊರೊನಾ ಮುಂಜಾಗ್ರತಾ ಕ್ರಮ ಪಾಲಿಸುವಂತೆ ತಿಳಿಸಲಾಯಿತು. ಪ್ರತಿ ತರಗತಿಯಲ್ಲಿ 20 ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.
ಮತ್ತೊಂದೆಡೆ ರಾಮನಗರದಲ್ಲೂ ಶಾಲಾ -ಕಾಲೇಜುಗಳಿಗೆ ವಿದ್ಯಾರ್ಥಿಗಳು ಆಗಮಿಸಿದ್ದು, ಸಿಬ್ಬಂದಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ವೇಳೆ ಮಕ್ಕಳಿಗೆ ಕೊರೊನಾ ನಿಯಮ ಪಾಲಿಸುವಂತೆ ತಿಳಿಹೇಳಲಾಯಿತು. ಕೆಲ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಚಾಕಲೇಟ್, ಹೂವು ನೀಡಿ ಸ್ವಾಗತಿಸಲಾಯಿತು.