ರಾಮನಗರ: ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ಪಟ್ಟಲದಮ್ಮ ದೇವಾಲಯ ಹಾಗೂ ವಡ್ಡರದೊಡ್ಡಿ ಗ್ರಾಮದ ಮಹದೇಶ್ವರ ದೇವಸ್ಥಾನದಲ್ಲಿ ಖದೀಮರು ಕಳವು ಮಾಡಿದ್ದಾರೆ.
ಕಳ್ಳರು ಮಹದೇಶ್ವರ ದೇವಾಲಯದ ಬೀಗ ಮುರಿದು ಒಳನುಗ್ಗಿದ್ದಾರೆ. ನಂತರ ಅಲ್ಲಿ ದೇವರಿಗೆ ಧರಿಸಲಾಗಿದ್ದ 30 ಕೆ.ಜಿ ತೂಕದ ಪಂಚಲೋಹದ ಪ್ರಭಾವಳಿ, ನಾಗರ ಸೆಡೆ, ದೀಪಗಳು, ಆರತಿ ತಟ್ಟೆ, ಬಿಂದಿಗೆ ಹುಂಡಿ ಹಾಗೂ ಗಂಟೆಗಳನ್ನು ಹೊತ್ತೊಯ್ದಿದ್ದಾರೆ. ಸುಮಾರು 30 ರಿಂದ 40 ಸಾವಿರ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಮಹದೇಶ್ವರ ದೇವಾಲಯ ಕಳ್ಳತನದ ನಂತರ ಚಕ್ಕೆರೆ ಶಕ್ತಿ ದೇವತೆ ಪಟ್ಟಲದಮ್ಮ ದೇವಾಲಯ ಕಳ್ಳತನ ಮಾಡಲು ಯತ್ನಿಸಿ ವಿಫಲರಾಗಿದ್ದಾರೆ. ದೇವಾಲಯಕ್ಕೆ ಅಳವಡಿಸಿದ ಸಿಸಿ ಕ್ಯಾಮೆರಾಗಳನ್ನು ಬೇರೆಡೆ ತಿರುಗಿಸಿದ್ದಾರೆ. ಕಿಟಕಿ ಗ್ಲಾಸ್ ಒಡೆದಿದ್ದಾರೆ. ಬಾಗಿಲಿನಲ್ಲಿ ನಿಂತು ಪಕ್ಷಿಗಳನ್ನು ಬೇಟೆಯಾಡುವ ಕ್ಯಾಟರ್‌ಬಿಲ್ ಬಳಸಿ ದೇವಾಲಯದ ಒಳಗಿದ್ದ ಸಿಸಿಟಿವಿಯ ಡಿವಿಆರ್ ಒಡೆದಿದ್ದಾರೆ. ನಂತರ ಬಾಗಿಲು ಒಡೆಯುವ ಪ್ರಯತ್ನ ಮಾಡಿದ್ದಾರೆ. ಆದರೆ, ಬಾಗಿಲು ಒಡೆಯಲು ಸಾಧ್ಯವಾಗದೆ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ