ಕರ್ನಾಟಕ

karnataka

ETV Bharat / state

ಅರ್ಕಾವತಿ ನದಿ ಶುದ್ಧೀಕರಣ, ಶುದ್ಧ ನೀರಿನ ಘಟಕಗಳನ್ನು ಹೆಚ್ಚಿಸಲು ಆಗ್ರಹ - ramanagara news today

ರಾಮನಗರದ ಜೀವನದಿ ಅರ್ಕಾವತಿ ನದಿಯ ಸರಬರಾಜು ಹಾಗೂ ಶುದ್ಧೀಕರಣದ ಪಂಪ್​ ಹೌಸ್​ ಘಟಕ ದುರಸ್ತಿಗೊಳಿಸಬೇಕು. ಕುಡಿವ ನೀರನ್ನು ಸಮರ್ಪಕವಾಗಿ ವದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.

ಅರ್ಕಾವತಿ ನದಿಯ ಸರಬರಾಜು ಹಾಗೂ ಶುದ್ಧೀಕರಣದ ಪಂಪ್​ ಹೌಸ್​ ಘಟಕ ದುರಸ್ತಿಗೊಳಿಸಲು ಸಾರ್ವಜನಿಕರ ಒತ್ತಾಯ

By

Published : Aug 1, 2019, 11:35 AM IST

ರಾಮನಗರ‌:ಸಮುದ್ರದ ನಂಟು ಆದರೆ, ಉಪ್ಪಿಗೆ ಬರ ಅಂತಾರೆ ಹಾಗೇ ರಾಮನಗರದಲ್ಲಿ ನದಿ ಹರಿದರೂ ನೀರಿನ ಸಮಸ್ಯೆ ಎದುರಾಗಿದೆ. ಒಂದು ಕಾಲದಲ್ಲಿ ಜೀವನದಿ ಎಂದು ಖ್ಯಾತಿ ಪಡೆದು ನಗರಕ್ಕೆ ಕುಡಿಯುವ ನೀರನ್ನು ವದಗಿಸುತ್ತಿದ್ದ ಅರ್ಕಾವತಿ ನದಿ ಇಂದು ಬಳಸಲು ಬಾರದಂತಾಗಿದೆ. ತ್ಯಾಜ್ಯ ವಸ್ತುಗಳು ಸೇರಿಕೊಂಡಿದ್ದರ ಜತೆಗೆ ಸಮರ್ಪಕ ನಿರ್ವಹಣೆ ಇಲ್ಲದೇ ಕೊಚ್ಚೆಗುಂಡಿಯಾಗಿ ಹರಿಯುತ್ತಿದೆ.

ಅರ್ಕಾವತಿ ನದಿಯ ಸರಬರಾಜು ಹಾಗೂ ಶುದ್ಧೀಕರಣದ ಪಂಪ್​ ಹೌಸ್​ ಘಟಕ ದುರಸ್ತಿಗೊಳಿಸಲು ಸಾರ್ವಜನಿಕರ ಒತ್ತಾಯ

ನಗರಕ್ಕೆ ಕಾವೇರಿ ನೀರು ಬಳಸಿಕೊಂಡು ಕುಡಿವ ನೀರು ಸರಬರಾಜು ಮಾಡುವ ಕಾವೇರಿ ನೀರಾವರಿ ನಿಗಮ ಕೇವಲ ಗೃಹ ಬಳಕೆಗಾಗಿ ಅರ್ಕಾವತಿ ನದಿ ನೀರನ್ನು ಬಳಸುವಂತೆ ನಗರ ಸಭೆಯ ಮೂಲಕ ಘೋಷಣೆ ಹೊರಡಿಸಿದೆ. ಆದರೆ, ನಗರಕ್ಕೆ ಬಿಡಲಾಗುತ್ತಿರುವ ಕಾವೇರಿ ನೀರು ಸಮರ್ಪಕವಾಗಿಲ್ಲದ ಕಾರಣ ಹಲವು ವಾರ್ಡ್​ಗಳಲ್ಲಿ ಅರ್ಕಾವತಿ ನದಿ ನೀರನ್ನೆ ಕುಡಿಯುತ್ತಿದ್ದಾರೆ. ಯಾವುದೇ ಫಿಲ್ಟರ್​ ಇಲ್ಲದೇ ಇರುವುದರಿಂದ ಅನೇಕ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ.

ಅರ್ಕಾವತಿ ನದಿ ನೀರು ಶುದ್ಧೀಕರಿಸಿ ಸರಬರಾಜು ಮಾಡಲು ನಿರ್ಮಾಣ ಮಾಡಿರುವ ಪಂಪ್ ಹೌಸ್ ಸುತ್ತ ದುರ್ನಾತ ಬೀರುತ್ತಿದೆ. ಕಪ್ಪೆ ಜೊಂಡು ಸೇರಿದಂತೆ ನಿರಂತರವಾಗಿ ತ್ಯಾಜ್ಯ ಸೇರುತ್ತಿದೆ. ನಗರಸಭೆ ಕುಡಿಯಲು ಅರ್ಕಾವತಿ ನೀರು ಬಳಸಬೇಡಿ, ಕಾವೇರಿ ನೀರನ್ನು ಬಳಸುವಂತೆ ಘೋಷಿಸಿದೆ. ಆದರೆ, ಸಮಪರ್ಕವಾಗಿ ಕಾವೇರಿ ನೀರು ಎಲ್ಲ ವಾರ್ಡ್​ಗಳಿಗೆ ತಲುಪುತ್ತಿಲ್ಲ ಎನ್ನುವುದು ನಿವಾಸಿಗಳ ಆರೋಪವಾಗಿದೆ.

ಅನೇಕ ಬಾರಿ ಮನವಿ ಸಲ್ಲಿಸಿ ಶುದ್ಧ ನೀರಿನ ಕೊರತೆ ಬಗ್ಗೆ ಗಮನಕ್ಕೆ ತಂದರೂ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸ್ಥಳೀಯರು ಆಕ್ರೋಶಕ್ಕೂ ಕಾರಣವಾಗಿದೆ ವ್ಯಕ್ತಪಡಿಸಿದ್ದಾರೆ.

ಕಾವೇರಿ ನೀರಾವರಿ ನಿಗಮ ಹಾಗೂ ಸ್ಥಳೀಯ ಆಡಳಿತ ಮಂಡಳಿ ವಿಫಲವಾಗಿದ್ದರಿಂದ ಸಾರ್ವಜನಿಕರು ಗೋಳಿಡುವಂತಾಗಿದೆ. ಶುದ್ಧ ನೀರಿನ ಘಟಕಗಳ ದುರಸ್ತಿ ಕಾರ್ಯವಾಗಬೇಕು. ಹೆಚ್ಚಿನ ಘಟಕಗಳನ್ನು ತೆರೆಯಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ABOUT THE AUTHOR

...view details