ಕರ್ನಾಟಕ

karnataka

ETV Bharat / state

ಕೇತುಗಾನಹಳ್ಳಿ ತೋಟದ ಮನೆಯಲ್ಲಿ ಹೆಚ್​​​ಡಿಕೆ ಭೇಟಿ ನಂತರ ಆರ್.ಅಶೋಕ್ ಹೇಳಿದ್ದೇನು!? - ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ

ಕಲಬುರಗಿ ಪಾಲಿಕೆ ಚುಕ್ಕಾಣಿಗೆ ಜೆಡಿಎಸ್‌-ಕಾಂಗ್ರೆಸ್‌ಗೆ ಬೆಂಬಲ ಕೊಟ್ಟಿದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಾಗೇನೂ ಇಲ್ಲ, ಕಾಂಗ್ರೆಸ್‌ನಲ್ಲೇ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರಲ್ಲೇ ಒಮ್ಮತವಿಲ್ಲ. ಮೇಯರ್ ಪಟ್ಟದ ಡಿಮ್ಯಾಂಡ್‌ ಕೂಡ ಚರ್ಚೆಯಾಗಿಲ್ಲ..

ಕೇತುಗಾನಹಳ್ಳಿ ತೋಟದ ಮನೆಯಲ್ಲಿ ಹೆಚ್​​​ಡಿಕೆ ಭೇಟಿ ಮಾಡಿದ ಆರ್.ಅಶೋಕ್
ಕೇತುಗಾನಹಳ್ಳಿ ತೋಟದ ಮನೆಯಲ್ಲಿ ಹೆಚ್​​​ಡಿಕೆ ಭೇಟಿ ಮಾಡಿದ ಆರ್.ಅಶೋಕ್

By

Published : Sep 11, 2021, 9:16 PM IST

ರಾಮನಗರ :ಕಲಬುರಗಿ ಪಾಲಿಕೆ ಚುನಾವಣೆ ಅತಂತ್ರ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಕಿಂಗ್ ಮೇಕರ್ ಜೆಡಿಎಸ್ ಬೆಂಬಲ ಕೊಡುವಂತೆ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ.

ಬಿಡದಿಯ ಕೇತುಗಾನಹಳ್ಳಿ ತೋಟದ ಮನೆಯಲ್ಲಿ ಮಾಜಿ ಸಿಎಂ ಹೆಚ್​​​ಡಿಕೆ ಭೇಟಿಯಾದ ಅವರು, ಕಲಬುರ್ಗಿ ಪಾಲಿಕೆ ಅಧಿಕಾರ ಹಿಡಿಯಲು ನಮ್ಮ ಪಕ್ಷಕ್ಕೆ ಬೆಂಬಲ ಕೊಡುವಂತೆ ಮಾತನಾಡಿದ್ದೇನೆ. ಇದಕ್ಕೆ ಕುಮಾರಸ್ವಾಮಿ ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಚಿವ ಆರ್ ಅಶೋಕ್ ಹೇಳಿದರು.

ಮಾಜಿ ಸಿಎಂ ಹೆಚ್​​​ಡಿಕೆ ಭೇಟಿ ಬಳಿಕ ಸಚಿವ ಆರ್ ಅಶೋಕ್ ಪ್ರತಿಕ್ರಿಯೆ ನೀಡಿರುವುದು..

ಕಲಬುರಗಿ ಪಾಲಿಕೆ ಬೆಂಬಲದ ಬಗ್ಗೆ ಕುಮಾರಸ್ವಾಮಿ ಅವರು ಸೋಮವಾರ ಸದನದಲ್ಲಿ ಚರ್ಚಿಸೋಣ ಎಂದಿದ್ದಾರೆ. ದೇವೇಗೌಡರ ಜೊತೆಗೆ ಚರ್ಚಿಸಿ ಒಂದೊಳ್ಳೆ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ‌. ದೊಡ್ಡಬಳ್ಳಾಪುರದ ಚುನಾವಣೆ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಹಾಗೆಯೇ, ಕಲಬುರಗಿ ಪಾಲಿಕೆ ಚುಕ್ಕಾಣಿಗೆ ಜೆಡಿಎಸ್‌-ಕಾಂಗ್ರೆಸ್‌ಗೆ ಬೆಂಬಲ ಕೊಟ್ಟಿದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಾಗೇನೂ ಇಲ್ಲ, ಕಾಂಗ್ರೆಸ್‌ನಲ್ಲೇ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರಲ್ಲೇ ಒಮ್ಮತವಿಲ್ಲ. ಮೇಯರ್ ಪಟ್ಟದ ಡಿಮ್ಯಾಂಡ್‌ ಕೂಡ ಚರ್ಚೆಯಾಗಿಲ್ಲ ಎಂದಿದ್ದಾರೆ‌.

ಇದನ್ನೂ ಓದಿ : ಸಚಿವ ಆರ್‌.ಅಶೋಕ್‌ ಭೇಟಿ ವಿಚಾರ: ಮಾಜಿ ಸಿಎಂ ಹೆಚ್‌ಡಿಕೆ ಟ್ವೀಟ್‌

ABOUT THE AUTHOR

...view details