ಕರ್ನಾಟಕ

karnataka

ETV Bharat / state

ರಾಮನಗರದಲ್ಲಿ ದೊಡ್ಡಪ್ಪನಿಂದಲೇ ಮಗುವಿನ ಮೇಲೆ ಅತ್ಯಾಚಾರ - ಚಾಕೋಲೇಟ್ ಕೊಡಿಸುವುದಾಗಿ ಸಹೋದರನ ಮಗಳನ್ನು ಕರೆದು ಅತ್ಯಾಚಾರ ನಡೆಸಿದ ದೊಡ್ಡಪ್ಪ

ರಾತ್ರಿ 12 ಗಂಟೆ ಸುಮಾರಿಗೆ ವಾಪಸ್​ ಮಗುವನ್ನು ಆರೋಪಿ ಕರೆದುಕೊಂಡು ಬಂದಿದ್ದ. ಮಗುವಿನ ಮೇಲೆ ರಕ್ತದ ಕಲೆ, ಗಾಯದ ಗುರುತುಗಳನ್ನು ನೋಡಿ ಗಾಬರಿಯಾದ ಪೋಷಕರು ಕೂಡಲೇ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.

ದೊಡ್ಡಪ್ಪನಿಂದಲೇ ಮಗುವಿನ ಮೇಲೆ ಅತ್ಯಾಚಾರ
ದೊಡ್ಡಪ್ಪನಿಂದಲೇ ಮಗುವಿನ ಮೇಲೆ ಅತ್ಯಾಚಾರ

By

Published : Jun 3, 2022, 5:37 PM IST

ರಾಮನಗರ: ಸ್ವಂತ ದೊಡ್ಡಪ್ಪನೇ ಎರಡು ವರ್ಷದ ಕಂದಮ್ಮನ ಮೇಲೆ ಅತ್ಯಾಚಾರವೆಸಗಿದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ಪಟ್ಟಣದ ಜರುಗಿದೆ. ಸಾದಿರ್(28) ಅತ್ಯಾಚಾರ ಆರೋಪಿಯಾಗಿದ್ದು, ಚಾಕೋಲೇಟ್ ಕೊಡಿಸುವುದಾಗಿ ಸಹೋದರನ ಮಗಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ರಾತ್ರಿಯಾದರೂ ಮಗುವನ್ನು ಮನೆಗೆ ಕರೆದುಕೊಂಡು ಬಂದಿರಲಿಲ್ಲ. ಆತನಿಗೆ ಕರೆ ಮಾಡಿದ ಪೋಷಕರು ಮಗು ಕರೆದುಕೊಂಡು ಬರುವಂತೆ ತಿಳಿಸಿದ್ದರು.

ರಾತ್ರಿ 12 ಗಂಟೆ ಸುಮಾರಿಗೆ ವಾಪಸ್​ ಮಗುವನ್ನು ಆರೋಪಿ ಕರೆದುಕೊಂಡು ಬಂದಿದ್ದ. ಮಗುವಿನ ಮೇಲೆ ರಕ್ತದ ಕಲೆ, ಗಾಯದ ಗುರುತುಗಳನ್ನು ನೋಡಿ ಗಾಬರಿಯಾದ ಪೋಷಕರು ಕೂಡಲೇ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಆರೋಪಿಯನ್ನು ಚನ್ನಪಟ್ಟಣ ಪೂರ್ವ ಠಾಣೆ ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: ಸಾಲದ ಸುನಾಮಿಯಲ್ಲಿ ದೇಶ, ರಾಜ್ಯ - ಇದು ಮೋದಿ ಸರ್ಕಾರದ ಸಾಧನೆ: ಸಿದ್ದರಾಮಯ್ಯ ವ್ಯಂಗ್ಯ

ABOUT THE AUTHOR

...view details