ಕರ್ನಾಟಕ

karnataka

ETV Bharat / state

ರಾಮನಗರ ಪ್ರವಾಸಿ ತಾಣಗಳಿಗೆ ಜ.2ರವರೆಗೆ ಪ್ರವೇಶ ನಿಷೇಧ - ಜಿಲ್ಲಾಧಿಕಾರಿ ಆದೇಶ

ಇಂದಿನಿಂದ ಜನವರಿ 2ರವರೆಗೆ ಜಿಲ್ಲೆಯ ಪ್ರವಾಸಿ ತಾಣಗಳಾದ ಶ್ರೀ ರಾಮದೇವರ ಬೆಟ್ಟ, ರೇವಣ ಸಿದ್ದೇಶ್ವರ ಬೆಟ್ಟ, ಕಣ್ವ ಜಲಾಶಯ, ಮಂಚನಬೆಲೆ ಜಲಾಶಯ, ಸಾವನದುರ್ಗಾ ಬೆಟ್ಟ, ಸಂಗಮ, ಮೇಕೆದಾಟು, ಚುಂಚಿ ಜಲಪಾತ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ..

Ramnagar tourist places closed till January 2
ಪ್ರವಾಸಿ ತಾಣಗಳಿಗೆ ಜ.2ರವರೆಗೆ ಪ್ರವೇಶ ನಿಷೇಧ

By

Published : Dec 31, 2021, 8:29 PM IST

ರಾಮನಗರ :ಈಗಾಗಲೇ ನೈಟ್​ ಕರ್ಫ್ಯೂ ಜಾರಿ ಮಾಡಿ ಹೊಸ ವರ್ಷಾಚರಣೆಗೆ ಸರ್ಕಾರ ಬ್ರೇಕ್​ ಹಾಕಿದೆ. ಇದೀಗ ಪ್ರವಾಸಿ ತಾಣಗಳಿಗೂ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ರಾಮನಗರ ಪ್ರವಾಸಿ ತಾಣಗಳಿಗೆ ಜ.2ರವರೆಗೆ ಪ್ರವೇಶ ನಿಷೇಧ

ಇಂದಿನಿಂದ ಜನವರಿ 2ರವರೆಗೆ ಜಿಲ್ಲೆಯ ಪ್ರವಾಸಿ ತಾಣಗಳಾದ ಶ್ರೀ ರಾಮದೇವರ ಬೆಟ್ಟ, ರೇವಣ ಸಿದ್ದೇಶ್ವರ ಬೆಟ್ಟ, ಕಣ್ವ ಜಲಾಶಯ, ಮಂಚನಬೆಲೆ ಜಲಾಶಯ, ಸಾವನದುರ್ಗಾ ಬೆಟ್ಟ, ಸಂಗಮ, ಮೇಕೆದಾಟು, ಚುಂಚಿ ಜಲಪಾತ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ.

ಇದಲ್ಲದೆ ರಾತ್ರಿ 10ರ ಬಳಿಕ ಪಾರ್ಟಿ, ಡಿಜೆ ಮ್ಯೂಸಿಕ್​ಗೆ ಬ್ರೇಕ್ ಬಿದ್ದಿದೆ. ರೆಸಾರ್ಟ್, ಹೋಟೆಲ್‌ನಲ್ಲಿ ಪಾರ್ಟಿ ನಡೆಸದಂತೆ ಸೂಚಿಸಲಾಗಿದೆ. ಈಗಾಗಲೇ ಸರ್ಕಾರದ ಮಾರ್ಗಸೂಚಿ ಪಾಲನೆಗೆ ಸೂಚಿಸಿದ್ದು, ನಿಯಮ ಮೀರಿದರೆ ಕಟ್ಟುನಿಟ್ಟಿನ ಕ್ರಮವನ್ನ ತೆಗೆದುಕೊಳ್ಳುವ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: ಕೊರೊನಾ ಆಯ್ತು ಇದೀಗ ಫ್ಲೊರೊನಾ ವೈರಸ್‌ ಪತ್ತೆ; ಏಲ್ಲಿ ಅಂತೀರಾ..?

ABOUT THE AUTHOR

...view details