ಕರ್ನಾಟಕ

karnataka

ETV Bharat / state

ರಾಮನಗರ: ಬಾಲಮಂದಿರದ ಮೂವರು ಬಾಲಕರು ನಾಪತ್ತೆ - ಅಪ್ರಾಪ್ತ ಬಾಲಕರು ನಾಪತ್ತೆ

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ‌ ವಂದಾರಗುಪ್ಪೆ ಗ್ರಾಮದ ಸರ್ಕಾರಿ ಬಾಲಮಂದಿರದಿಂದ ಮೂವರು ಬಾಲಕರು ನಾಪತ್ತೆಯಾಗಿದ್ದು, ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

Three boys are missing
ಮೂವರು ಬಾಲಕರು ನಾಪತ್ತೆ

By ETV Bharat Karnataka Team

Published : Sep 19, 2023, 5:42 PM IST

ರಾಮನಗರ:ಬಾಲಮಂದಿರದಿಂದ ಮೂವರು ಬಾಲಕರು ನಾಪತ್ತೆಯಾಗಿರುವ ಪ್ರಕರಣ ಬೊಂಬೆನಗರಿ ಚನ್ನಪಟ್ಟಣ ತಾಲೂಕಿನ‌ ವಂದಾರಗುಪ್ಪೆ ಗ್ರಾಮದಲ್ಲಿ ನಡೆದಿದೆ. ಮಂಗಳವಾರ ಬೆಳಗ್ಗೆ ಮುಖ ತೊಳೆಯುವ ನೆಪದಲ್ಲಿ ಸರ್ಕಾರಿ ಬಾಲಮಂದಿರದಿಂದ ಅಪ್ರಾಪ್ತ ಬಾಲಕರು ನಾಪತ್ತೆಯಾಗಿದ್ದರು ಎನ್ನಲಾಗಿದೆ. ಕಳೆದ ಮೂರು ದಿನಗಳಿಂದ ಸಿಬ್ಬಂದಿ ಬಾಲಕರ ಹುಡುಕಾಟದಲ್ಲಿ ತೊಡಗಿದ್ದರು. ಆದರೆ ಬಾಲಕರು ಪತ್ತೆಯಾಗದಿರುವ ಹಿನ್ನೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ‌.

ಕಳೆದ ಸೆ. 14 ರಂದು ರಾಮನಗರ ಬಾಲಮಂದಿರದಿಂದ ಚನ್ನಪಟ್ಟಣ ತಾಲೂಕಿಗೆ ಬಾಲಕರು ವರ್ಗಾವಣೆಗೊಂಡಿದ್ದರು. ಮೂರು ಪಾಳೆಯಲ್ಲಿ ಬಾಲಕರನ್ನು ಸಿಬ್ಬಂದಿ ನೋಡಿಕೊಳ್ಳುತ್ತಿದ್ದರು. ನಾಪತ್ತೆಯಾಗಿರುವ ಬಾಲಕರು 16, 13, 11 ವರ್ಷದವರು ಇದ್ದು, ಬಾಲಮಂದಿರದ ಸಿಬ್ಬಂದಿ ಸಿದ್ದರಾಜು ನೋಡಿಕೊಳ್ಳುತ್ತಿದ್ದ ಸಮಯದಲ್ಲಿ‌ ಬಾಲಕರು ನಾಪತ್ತೆಯಾಗಿದ್ದಾರೆ. ಸದ್ಯ ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕರ ಶೋಧ ಕಾರ್ಯ ಮುಂದುವರಿದಿದೆ.

ಮೀನು ಹಿಡಿಯುಲು ಹೋಗಿದ್ದ ಇಬ್ಬರು ಯುವಕರು ನೀರುಪಾಲು:ದೂರು ದಾಖಲು

ABOUT THE AUTHOR

...view details