ಕರ್ನಾಟಕ

karnataka

ETV Bharat / state

ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ರಾಮನಗರದ ಬಾಲಕಿ ಆಯ್ಕೆ - ಈಟಿವಿ ಭಾರತ ಕನ್ನಡ

ರಾಮನಗರದ ಬಾಲಕಿ ಜನವರಿ ತಿಂಗಳಿನಲ್ಲಿ ಅಂಡಮಾನ್ ಮತ್ತು ಪಾಂಡಿಚೆರಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

girl selected for internationl yoga competition
ರಾಮನಗರದ ಬಾಲಕಿ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆ

By

Published : Dec 14, 2022, 11:40 AM IST

ರಾಮನಗರ:ಜಿಲ್ಲೆಯಚನ್ನಪಟ್ಟಣ ತಾಲೂಕಿನ ಕುವರಿ ಎಸ್. ಚೈತನ್ಯ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ನಗರದ ಮಂಡಿಪೇಟೆಯ ಭವ್ಯ ಹಾಗೂ ಸೆಂಥಿಲ್ ಕುಮಾರ್ ದಂಪತಿಯ ಪುತ್ರಿಯಾಗಿರುವ ಎಸ್.ಚೈತನ್ಯ ತನ್ನ ಪ್ರತಿಭೆಯ ಮೂಲಕ‌ ಅಂತಾರಾಷ್ಟ್ರೀಯ ಯೋಗಪಟುವಾಗಿ ಗುರುತಿಸಿಕೊಂಡಿದ್ದಾರೆ. ಬಾಲ್ಯದಿಂದಲೇ ಯೋಗ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಇವರು, ಬೆಂಗಳೂರಿನ ಯೋಗಗುರುಗಳಾದ ರಾಜೇಶ್ ಆಚಾರ್ಯ ಹಾಗೂ ವೈಷ್ಣವಿ ಬಳಿ ತರಬೇತಿ ಪಡೆದು ಇದೀಗ, ಅಂತಾರಾಷ್ಟ್ರೀಯ ಮಟ್ಟದ ಯೋಗಪಟುವಾಗಿ ಹೊರ ಹೊಮ್ಮಿದ್ದಾರೆ.

ರಾಮನಗರದ ಬಾಲಕಿ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆ

ಬೆಂಗಳೂರಿನ ರೋಟರಿ ವಿದ್ಯಾಲಯದಲ್ಲಿ 8 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಚೈತನ್ಯ, ಇತ್ತೀಚಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲೆಯ 14 ಮತ್ತು 17ರ ಒಳಗಿನ ವಯಸ್ಸಿನ ಬಾಲಕ ಹಾಗೂ ಬಾಲಕಿಯರ ಮಟ್ಟದ ಯೋಗಸ್ಪರ್ಧೆಯಲ್ಲಿ, ತಾಲೂಕುಮಟ್ಟ, ಜಿಲ್ಲಾಮಟ್ಟ, ಬೆಂಗಳೂರು ವಿಭಾಗ ಹಾಗೂ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸುವ ಮೂಲಕ‌ ಇದೀಗ, ಜನವರಿ ತಿಂಗಳಿನಲ್ಲಿ ಅಂಡಮಾನ್ ಮತ್ತು ಪಾಂಡಿಚೆರಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ರಾಮನಗರದ ಬಾಲಕಿ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆ

ಬಾಲ್ಯದಿಂದಲೇ ಯೋಗಾಸನದ ಬಗ್ಗೆ ಅಪಾರವಾದ ಆಸಕ್ತಿ ಬೆಳೆಸಿಕೊಂಡು, ಸತತ ತರಬೇತಿ, ಶ್ರದ್ಧೆಯ ಮೂಲಕ ಅಂತಾರಾಷ್ಟ್ರೀಯ ಯೋಗಪಟುವಾಗಿ ಗುರುತಿಸಿಕೊಂಡು ತಾಲೂಕಿಗೆ ಕೀರ್ತಿ ತಂದಿರುವ ಎಸ್.ಚೈತನ್ಯ ಅವರನ್ನು ಅವರ ಯೋಗ ಗುರುಗಳು, ಕುಟುಂಬಸ್ಥರು ಅಭಿನಂದಿಸಿದ್ದಾರೆ.

ಇದನ್ನೂ ಓದಿ:ಶೂಟಿಂಗ್ ಚಾಂಪಿಯನ್‌ಶಿಪ್‌: ಏರ್ ಪಿಸ್ತೂಲ್​ನಲ್ಲಿ ಕರ್ನಾಟಕದ ದಿವ್ಯಾಗೆ ಚಿನ್ನ

ABOUT THE AUTHOR

...view details