ರಾಮನಗರ: ಇಲ್ಲಿನ ನಗರಸಭೆ ಅಧಿಕಾರದ ಚುಕ್ಕಾಣಿಯನ್ನು ಕಾಂಗ್ರೆಸ್ ಹಾಗೂ ಚನ್ನಪಟ್ಟಣ ನಗರಸಭೆ ಚುಕ್ಕಾಣಿಯನ್ನ ಜೆಡಿಎಸ್ ಹಿಡಿಯುವ ಮೂಲಕ ಸಮಬಲ ಹೋರಾಟ ನಡೆಸಿವೆ.
ಇತ್ತ ಬಿಜೆಪಿ ಪಾರ್ಟಿ ರಾಮನಗರದಲ್ಲಿ ಒಂದೂ ಖಾತೆ ತೆರೆಯದೆ ಭಾರಿ ಮುಖಭಂಗ ಅನುಭವಿಸಿದ್ರೆ, ಚನ್ನಪಟ್ಟಣ ನಗರಸಭೆಯಲ್ಲಿ 7 ಸ್ಥಾನ ಗೆಲ್ಲುವ ಮೂಲಕ ಸಚಿವ ಸಿ.ಪಿ.ಯೋಗೇಶ್ವರ್ ಕ್ಷೇತ್ರದಲ್ಲಿ ಹಿಡಿತ ಸಾಧಿಸಿಕೊಂಡಿದ್ದಾರೆ.
ರಾಮನಗರ ನಗರಸಭೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಒಟ್ಟು 31 ವಾರ್ಡ್ಗಳ ಪೈಕಿ ಕಾಂಗ್ರೆಸ್ 19 ಹಾಗೂ ಜೆಡಿಎಸ್ 11 ವಾರ್ಡ್ನಲ್ಲಿ ಗೆಲುವು ಸಾಧಿಸಿದೆ. ಒಂದು ವಾರ್ಡ್ನಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ. ಬಿಜೆಪಿ ಒಂದು ವಾರ್ಡ್ನಲ್ಲೂ ಖಾತೆ ತೆರೆದಿಲ್ಲ.
ರಾಮನಗರದಲ್ಲಿ ಕಾಂಗ್ರೆಸ್ ಪ್ರಾಬಲ್ಯ, ಚನ್ನಪಟ್ಟಣದಲ್ಲಿ ಜೆಡಿಎಸ್ ಹವಾ ರಾಮನಗರ ನಗರಸಭಾ ಚುನಾವಣಾ ಫಲಿತಾಂಶದಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಅಶ್ವತ್ಥ ನಾರಾಯಣ್ಗೆ ಮುಖಭಂಗವಾಗಿದೆ. ಹಾಲಿ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ಇದ್ದರೂ ರಾಮನಗರದಲ್ಲಿ 11 ಸ್ಥಾನಗಳಿಗೆ ಜೆಡಿಎಸ್ ತೃಪ್ತಿ ಪಟ್ಟುಕೊಂಡಿದೆ.
ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಅಶ್ವತ್ಥ ನಾರಾಯಣ ಎಲೆಕ್ಷನ್ಗೆ ಅಬ್ಬರದ ಪ್ರಚಾರ ನಡೆಸಿದ್ದರು. 20 ವಾರ್ಡ್ಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಅಂತಾ ಹೇಳಿದ್ದರು. ಆದರೆ 1 ವಾರ್ಡ್ನಲ್ಲೂ ಗೆದ್ದಿಲ್ಲ.
ಮತ್ತೊಂದೆಡೆ ಚನ್ನಪಟ್ಟಣ ನಗರಸಭೆ 31 ವಾರ್ಡ್ಗಳ ಪೈಕಿ 16ರಲ್ಲಿ ಜೆಡಿಎಸ್, 7ರಲ್ಲಿ ಕಾಂಗ್ರೆಸ್ ಹಾಗೂ 7ರಲ್ಲಿ ಬಿಜೆಪಿ ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ. ಈ ಮೂಲಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ತಮ್ಮ ಸ್ವಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯ ಉಳಿಸಿಕೊಂಡಿದ್ದಾರೆ.
ಓದಿ:ಕೋವಿಡ್ ಕಾಲದಲ್ಲಿ ಆ್ಯಂಬುಲೆನ್ಸ್ ಡ್ರೈವರ್ ಆದ ಯುವ ನಟ ಅರ್ಜುನ್ ಗೌಡ