ಕರ್ನಾಟಕ

karnataka

ಭ್ರಷ್ಟಾಚಾರ ಆರೋಪ ಹೊತ್ತಿರುವ ಕಾರ್ಯದರ್ಶಿ ಬದಲಿಸಬೇಕು : ರಸ್ತೆಗೆ ಹಾಲು ಸುರಿದು ಗ್ರಾಮಸ್ಥರ ಆಕ್ರೋಶ

By

Published : May 1, 2021, 4:13 PM IST

ಹಾಲು ಉತ್ಪಾದಕರ ಸಹಕಾರ ಸಂಘ ಸೂಪರ್‌ ಸೀಡ್ ಆದರೂ ಮತ್ತೊಮ್ಮೆ ಅದೇ ಭ್ರಷ್ಟಾಚಾರ ಆರೋಪ ಹೊತ್ತಿರುವ ಕಾರ್ಯದರ್ಶಿ ನೇಮಕ ಮಾಡಿರುವುದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶಗೊಂಡಿದ್ದಾರೆ..

ರಸ್ತೆಗೆ ಹಾಲು ಸುರಿದು ಗ್ರಾಮಸ್ಥರ ಆಕ್ರೋಶ
ರಸ್ತೆಗೆ ಹಾಲು ಸುರಿದು ಗ್ರಾಮಸ್ಥರ ಆಕ್ರೋಶ

ರಾಮನಗರ: ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯದರ್ಶಿಯನ್ನು ಬದಲಿಸಬೇಕು. ಇಲ್ಲ ಎಂದರೆ ಡೈರಿಗೆ ಹಾಲು ಹಾಕುವುದಿಲ್ಲ ಎಂದು ರಸ್ತೆಗೆ ಹಾಲು ಸುರಿದು ಪ್ರತಿಭಟಿಸರುವ ಘಟನೆ ನಡೆದಿದೆ.

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರು ಹೋಬಳಿಯಲ್ಲಿರುವ ಕೆ.ನಾಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಈ ಘಟನೆ ನಡೆದಿದೆ. ಕಾರ್ಯದರ್ಶಿ ಬದಲಿಸುವವರೆಗೂ ಗ್ರಾಮಸ್ಥರ್ಯಾರೂ ಕೂಡ ಹಾಲು ಹಾಕುವುದಿಲ್ಲ ಎಂದು ಕಳೆದ ನಾಲ್ಕೈದು ದಿನಗಳಿಂದ ರಸ್ತೆಗೆ ಹಾಲು ಸುರಿಯುತ್ತಿದ್ದಾರೆ.

ರಸ್ತೆಗೆ ಹಾಲು ಸುರಿದು ಗ್ರಾಮಸ್ಥರ ಆಕ್ರೋಶ..

ಹಾಲು ಉತ್ಪಾದಕರ ಸಹಕಾರ ಸಂಘ ಸೂಪರ್‌ ಸೀಡ್ ಆದರೂ ಮತ್ತೊಮ್ಮೆ ಅದೇ ಭ್ರಷ್ಟಾಚಾರ ಆರೋಪ ಹೊತ್ತಿರುವ ಕಾರ್ಯದರ್ಶಿ ನೇಮಕ ಮಾಡಿರುವುದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶಗೊಂಡಿದ್ದಾರೆ.

ಸಂಘದ ಕಾರ್ಯದರ್ಶಿ ಜಗದೀಶ್ ಮೇಲೆ ಈಗಾಗಲೆ 3 ಲಕ್ಷ ರೂ. ಭ್ರಷ್ಟಾಚಾರ ಮಾಡಿರುವ ಆರೋಪ ಇದ್ದು, ಮತ್ತೊಮ್ಮೆ ಹಗರಣ ಮಾಡಿದ ಕಾರ್ಯದರ್ಶಿಯನ್ನೇ ಆಯ್ಕೆ ಮಾಡಿರುವುದಕ್ಕೆ ಗ್ರಾಮಸ್ಥರು ಆಕ್ರೋಶಗೊಂಡು ಹಾಲನ್ನ ರಸ್ತೆಗೆ ಸುರಿದಿದ್ದಾರೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ABOUT THE AUTHOR

...view details