ಕರ್ನಾಟಕ

karnataka

ETV Bharat / state

ರಾಮನಗರ: ಫಾರೆಸ್ಟ್ ಗಾರ್ಡ್ ಆತ್ಮಹತ್ಯೆ - Forest Guard committe suicide

ಶ್ರೀನಿವಾಸ್ ಎಂಬ ಫಾರೆಸ್ಟ್​​ ಗಾರ್ಡ್​ ರಾಮನಗರದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Forest Guard committe suicide
ಫಾರೆಸ್ಟ್ ಗಾರ್ಡ್ ಆತ್ಮಹತ್ಯೆ

By

Published : Mar 31, 2021, 4:23 PM IST

ರಾಮನಗರ: ಫಾರೆಸ್ಟ್ ಗಾರ್ಡ್ ನೇಣು ಬಿಗಿದುಕೊಂಡು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ರಾಮನಗರದಲ್ಲಿ ಜರುಗಿದೆ.

ಶ್ರೀನಿವಾಸ್ ಮೃತ ವ್ಯಕ್ತಿಯಾಗಿದ್ದು, ಪಾವಗಡ ಮೂಲದವರಾಗಿದ್ದಾರೆ. ರಾಮನಗರ ಭಾಗದ ಫಾರೆಸ್ಟ್ ಡಿಪಾರ್ಟ್ಮೆಂಟ್​​ನಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದರು. ನಿನ್ನೆ ರಾತ್ರಿ ಹತ್ತು ಗಂಟೆಯ ಸುಮಾರಿಗೆ ಫ್ಯಾನ್​ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಇದನ್ನೂ ಓದಿ: ಟ್ಯಾಕ್ಸಿ ಚಾಲಕನ ಆತ್ಮಹತ್ಯೆ: ಏರ್​​ಪೋರ್ಟ್ ಟ್ಯಾಕ್ಸಿ ಸ್ಥಗಿತ, ಪ್ರಯಾಣಿಕರ ಪರದಾಟ

ರಾಮನಗರದ ಫಾರೆಸ್ಟ್ ಡಿಪಾರ್ಟ್ಮೆಂಟ್​ನ ಕ್ವಾಟ್ರರ್ಸ್​ನಲ್ಲಿ ವಾಸವಿದ್ದ ಇವರು ಕಳೆದ‌ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು ಎನ್ನಲಾಗಿದೆ. ಕಳೆದ ವರ್ಷ ಮುಖ್ಯಮಂತ್ರಿ ಪದಕ ಸಹ ಪಡೆದಿದ್ದ ಶ್ರೀನಿವಾಸ್ ಅವರ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಶಂಕೆ ಉಂಟಾಗಿದೆ. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ABOUT THE AUTHOR

...view details