ಕರ್ನಾಟಕ

karnataka

ETV Bharat / state

ಮೇಕೆ ಮೇಲೆ ಅತ್ಯಾಚಾರ! ಚನ್ನಪಟ್ಟಣದಲ್ಲಿ ಆಟೋ ಚಾಲಕನ ವಿರುದ್ಧ ಪೊಲೀಸರಿಗೆ ದೂರು - Ramanagara rape

ಮೇಕೆ ಮೇಲೆ ಅತ್ಯಾಚಾರ ಎಸಗಿ ವಿಕೃತಿ ಮೆರೆದ ಆರೋಪದಡಿ ಆಟೋ ಚಾಲಕನ ವಿರುದ್ಧ ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

rape on goat
ಮೇಕೆ ಮೇಲೆ ಅತ್ಯಾಚಾರ

By ETV Bharat Karnataka Team

Published : Sep 3, 2023, 12:52 PM IST

Updated : Sep 3, 2023, 1:54 PM IST

ರಾಮನಗರ:ವಿಕೃತ ಕಾಮಿಯೊಬ್ಬ ಮೇಕೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.ಚನ್ನಪಟ್ಟಣ ನಗರದ ಇಂದಿರಾ ಕಾಟೇಜ್ ನಿವಾಸಿಯ ವಿರುದ್ಧ ವ್ಯಕ್ತಿಯೊಬ್ಬರು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಚನ್ನಪಟ್ಟಣ ನಗರದ ಇಂದಿರಾ ಕಾಟೇಜ್ ನಿವಾಸಿ ಜಮೀರ್ ಖಾನ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಆಟೋ ಚಾಲಕನಾಗಿರುವ ಆರೋಪಿಯು ತಮ್ಮ ಬಡಾವಣೆಯಲ್ಲಿನ ನಿರ್ಮಾಣ ಹಂತದ ಮನೆಯ ಬಳಿ ಮೇಕೆಯೊಂದನ್ನು ಹಿಡಿದುಕೊಂಡು ಹೋಗುತ್ತಿದ್ದ. ಅದನ್ನು ಗಮನಿಸಿ ಅನುಮಾನ ಬಂದು ಹಿಂಬಾಲಿಸಿದಾಗ, ಆತ ಪ್ರಕೃತಿಗೆ ವಿರುದ್ಧವಾಗಿ ಸಂಭೋಗ ನಡೆಸುವ ಮೂಲಕ ಮೇಕೆಗೆ ಹಿಂಸೆ ನೀಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಯ ಕೃತ್ಯವನ್ನು ಮೊಬೈಲ್​​ನಲ್ಲಿ ಸೆರೆಹಿಡಿದಿದ್ದು, ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಶನಿವಾರ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ವೃದ್ಧೆ ಕೊಂದು ಅತ್ಯಾಚಾರ ಎಸಗಿದ ವಿಕೃತ ಕಾಮಿಯ ಬಂಧನ

ಕೆಜಿಎಫ್​ನಲ್ಲೂ ಹಸು ಕರು ಮೇಲೆ ನಡೆದಿತ್ತು ಅಸಹ್ಯ: ಕೆಲ ತಿಂಗಳ ಹಿಂದೆ 50 ವರ್ಷದ ವ್ಯಕ್ತಿಯೊಬ್ಬ ಹಸು ಕರು ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿ ಸಿಕ್ಕಿಬಿದ್ದಿದ್ದ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಸುಂದರಪಾಳ್ಯ ಬಡಾವಣೆಯಲ್ಲಿ ಹಸುವಿನ ಕರುವಿನ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಯನ್ನು ಬೇತಮಂಗಲ ಪೊಲೀಸರು ಬಂಧಿಸಿದ್ದರು. ಅತ್ಯಾಚಾರಕ್ಕೊಳಗಾದ ಕರು ಸಾವನ್ನಪ್ಪಿತ್ತು.

ರಾಯಚೂರಲ್ಲಿ ನಡೆದಿತ್ತು ಹೀನ ಕೃತ್ಯ:ಇಂತಹದೇ ಘಟನೆಯೊಂದು ರಾಯಚೂರಿನ ಲಿಂಗಸೂಗೂರು ತಾಲೂಕಿನಲ್ಲೂ ಕಳೆದ ವರ್ಷ ನಡೆದಿತ್ತು. ಕಾಮುಕನೊಬ್ಬ ಹಸುವಿನ ಕರು ಕಟ್ಟಿಹಾಕಿ ಅತ್ಯಾಚಾರ ಎಸಗಿರುವ ಬಗ್ಗೆ ದೂರು ದಾಖಲಾಗಿತ್ತು. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಬಿಹಾರದಲ್ಲಿ ಬೀದಿ ನಾಯಿ ಮೇಲೆ ಅತ್ಯಾಚಾರ:ಮಾರ್ಚ್ 8 ರಂದು ಬಿಹಾರದ ಪಾಟ್ನಾದಲ್ಲಿ ಬೀದಿ ನಾಯಿ ಮೇಲೆ ಅತ್ಯಾಚಾರ ನಡೆದಿತ್ತು. ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಬಳಿಕ ಎನ್​ಜಿಓವೊಂದು ಪೊಲೀಸ್ ಠಾಣೆಗೆ ದೂರು ನೀಡಿತ್ತು.

ಮಹಾರಾಷ್ಟ್ರದಲ್ಲಿ ಬಾಲಕನಿಂದ ಕೃತ್ಯ:ಇಂತಹುದ್ದೇ ಮತ್ತೊಂದು ಪ್ರಕರಣ ಸಹ ಮಹಾರಾಷ್ಟ್ರದಲ್ಲಿ ವರದಿಯಾಗಿತ್ತು. 16 ವರ್ಷದ ಬಾಲಕ ಹಸುವಿನ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿತ್ತು. ಹಸುವಿನ ಕಾಲುಗಳನ್ನು ಕಟ್ಟಿಹಾಕಿ ಬಾಲಕ ಅಸಹಜ ಕ್ರಿಯೆ ನಡೆಸುತ್ತಿದ್ದ ಎಂದು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಪೊಲೀಸರು ಬಾಲಕನ ವಿರುದ್ಧ ಅತ್ಯಾಚಾರ ಮತ್ತು ಪ್ರಾಣಿ ಹಿಂಸೆ ಪ್ರಕರಣ ದಾಖಲಿಸಿಕೊಂಡಿದ್ದರು. ಹಾಗೆಯೇ ನಾಗ್ಪುರದಲ್ಲಿ ನಾಯಿಯ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿದ್ದ 40 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದ ಬಗ್ಗೆ ವರದಿಯಾಗಿತ್ತು.

ಇದನ್ನೂ ಓದಿ:ಇನ್​ಸ್ಟಾಗ್ರಾಂ ಮೂಲಕ ಪರಿಚಯವಾದ ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 20 ವರ್ಷ ಶಿಕ್ಷೆ

Last Updated : Sep 3, 2023, 1:54 PM IST

ABOUT THE AUTHOR

...view details