ಕರ್ನಾಟಕ

karnataka

ETV Bharat / state

ರಾಮನಗರ: ಹಲವು ವರ್ಷಗಳಿಂದ ಜಾರಿಯಾಗದೇ ನನೆಗುದಿಗೆ ಬಿದ್ದ ರೈಲ್ವೆ ಯೋಜನೆ - Ramanagara news

2006-07ರಲ್ಲಿ ಬೆಂಗಳೂರು - ಕನಕಪುರ - ಮಳವಳ್ಳಿ ಮಾರ್ಗವಾಗಿ ಚಾಮರಾಜನಗರ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗಕ್ಕೆ ಜಾಗ ಗುರುತಿಸುವಂತೆ ಆದೇಶಿಸಲಾಗಿತ್ತು. ಈ ಯೋಜನೆಗೆ ಜಾಗ ಕೂಡ ಗುರಿತಿಸುವಂತೆ ಅಂದಿನ ರಾಜ್ಯ ಸರ್ಕಾರಕ್ಕೆ ಆದೇಶ ಕೂಡ ನೀಡಲಾಗಿತ್ತು‌. ಆದ್ರೆ ಇದುವರೆಗೂ ಈ ಭಾಗದ ರೈತರಿಗೆ ರೈಲಿನ ಭಾಗ್ಯ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ.

ರೈಲ್ವೆ ಯೋಜನೆ
ರೈಲ್ವೆ ಯೋಜನೆ

By

Published : Jan 26, 2021, 12:16 PM IST

ರಾಮನಗರ: ರೇಷ್ಮೆನಗರಿ ಜಿಲ್ಲೆಯಲ್ಲಿ ಕನಕಪುರಕ್ಕೆ ಉತ್ತಮ ರೈಲು ಯೋಜನೆ ಜಾರಿಯಾಗಬೇಕು ಎನ್ನುವ ಬೇಡಿಕೆ ಇದೆ. ಆದ್ರೆ ಹಲವು ವರ್ಷಗಳಿಂದ ರೈಲ್ವೆ ಯೋಜನೆ ಮಾತ್ರ ಜಾರಿಯಾಗದೇ ನನೆಗುದಿದೆ ಬಿದ್ದಿದೆ. ಜಿಲ್ಲೆಗೆ ಸಮಗ್ರ ರೈಲು ಯೋಜನೆ ಜಾರಿಯಾಗಬೇಕು ಹಾಗೂ ನೇರ ರೈಲು ಮಾರ್ಗಕ್ಕಾಗಿ ಕಳೆದ ಹಲವು ದಶಕಗಳ ಹೋರಾಟಕ್ಕೆ ಇನ್ನು ಕೂಡ ಪ್ರತಿಫಲ ಸಿಕ್ಕಿಲ್ಲ.

ಕನಕಪುರ ಜನತೆಯ ಅಸಮಾಧಾನ: ಕನಕಪುರ - ಮಳವಳ್ಳಿ - ಚಾಮರಾಜನಗರ ಜಿಲ್ಲೆಗೆ ನೇರ ರೈಲು ಮಾರ್ಗಬೇಕು ಎಂದು ಹಲವು ದಶಕಗಳ ಕಾಲ ಜನತೆ ಹೋರಾಟ ಮಾಡಿದ್ರು, ಯಾವುದೇ ಪ್ರಯೋಜನ ಮಾತ್ರ ಆಗಿಲ್ಲ. 2006-07ರಲ್ಲಿ ಬೆಂಗಳೂರು - ಕನಕಪುರ - ಮಳವಳ್ಳಿ ಮಾರ್ಗವಾಗಿ ಚಾಮರಾಜನಗರ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗಕ್ಕೆ ಜಾಗ ಗುರುತಿಸುವಂತೆ ಆದೇಶಿಸಲಾಗಿತ್ತು. ಈ ಯೋಜನೆಗೆ ಜಾಗ ಕೂಡ ಗುರಿತಿಸುವಂತೆ ಅಂದಿನ ರಾಜ್ಯ ಸರ್ಕಾರಕ್ಕೆ ಆದೇಶ ಕೂಡ ನೀಡಲಾಗಿತ್ತು‌. ಆದ್ರೆ ಇದುವರೆಗೂ ಈ ಭಾಗದ ರೈತರಿಗೆ ರೈಲಿನ ಭಾಗ್ಯ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ.

ಹಲವು ವರ್ಷಗಳಿಂದ ಜಾರಿಯಾಗದೆ ನೆನೆಗುದಿಗೆ ಬಿದ್ದ ರೈಲ್ವೆ ಯೋಜನೆ

ಈ ಯೋಜನೆ ಅಂದು ಕೇಂದ್ರ ಹಾಗೂ ರಾಜ್ಯದ ಶೇ. 50 ರಷ್ಟು ಅನುದಾನ ಹಂಚಿಕೆ ಮಾಡಿಕೊಡಲಾಗುತ್ತಿತ್ತು. ಯೋಜನೆ ಜಾರಿ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜಿಲ್ಲೆಯ ಜನತೆ ಆರೋಪಿಸುತ್ತಿದ್ದಾರೆ. ಕಾಮಗಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಭೂ ಸ್ವಾಧೀನ ಹೆಸರಿನಲ್ಲಿ ಯೋಜನೆ ಮುಂದೂಡುತ್ತಲೇ ಬರುತ್ತಿದ್ದಾರೆ. ಇನ್ನು ಸರ್ಕಾರ ಕೂಡ ಈ ಯೋಜನೆ ಜಾರಿಗೆ ತರಲು ಹಿಂದೇಟು ಹಾಕುತ್ತಿರುವುದು ಯೋಜನೆ ನನೆಗುದಿಗೆ ಬೀಳಲು ಪ್ರಮುಖ ಕಾರಣವಾಗಿದೆ.

ಓದಿ:ಮೂರು ಬಾರಿ ನನ್ನ ಖಾತೆ ಬದಲಾಗಿದೆ, ರಾಜೀನಾಮೆ ನಿರ್ಧಾರ ಮಾಡಿದ್ದು ನಿಜ: ಮಾಧುಸ್ವಾಮಿ

ಯೋಜನೆ ಜಾರಿಯಾದ್ರೆ ಅನುಕೂಲಗಳೇನು ಗೊತ್ತಾ: ಒಂದು ವೇಳೆ ಈ ಮಾರ್ಗವಾಗಿ ನೇರ ರೈಲು ಮಾರ್ಗ ನಿಗದಿತ ಅವಧಿಯಲ್ಲಿ ಜಾರಿ ಮಾಡಿದ್ರೆ, ಜಿಲ್ಲೆಯ ಜನತೆಗೆ ಹಾಗೂ ರೈತರಿಗೆ ಅನುಕೂಲವಾಗಲಿದೆ. ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳ ವೀಕ್ಷಣೆ ಮಾಡಲು ಅನುಕೂಲವಾಗುತ್ತೆ. ಜೊತೆಗೆ ಸರಕುಗಳ ಸಾಗಣೆ ಮಾಡಲು ಅನುಕೂವಾಗಲಿದೆ. ಆದಷ್ಟು ಬೇಗ ಯೋಜನೆ ಜಾರಿಯಾಗಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ABOUT THE AUTHOR

...view details