ಕರ್ನಾಟಕ

karnataka

ETV Bharat / state

ರಾಮನಗರ: ರೆಡ್​ ಹ್ಯಾಂಡ್​ ಆಗಿ ಎಸಿಬಿ ಬಲೆಗೆ ಬಿದ್ದ ಮಹಿಳಾ ಅಧಿಕಾರಿ - ರಾಮನಗರದಲ್ಲಿ ಎಸಿಬಿ ದಾಳಿ,

ಲಂಚ ಪಡೆಯುತ್ತಿರುವಾಗ ಮಹಿಳಾ ಅಧಿಕಾರಿಯೋರ್ವರು ಎಸಿಬಿ ಬಲೆಗೆ ಬಿದ್ದಿದ್ದಾರೆ.

Ramanagar PDO arrested, Ramanagar PDO arrested by ACB, ACB raid, ACB raid in Ramanagar, ACB raid news, ರಾಮನಗರ ಪಿಡಿಒ ಬಂಧನ,  ರಾಮನಗರ ಪಿಡಿಒ ಬಂಧಸಿದ ಎಸಿಬಿ, ಎಸಿಬಿ ದಾಳಿ, ರಾಮನಗರದಲ್ಲಿ ಎಸಿಬಿ ದಾಳಿ, ಎಸಿಬಿ ದಾಳಿ ಸುದ್ದಿ,
ರೆಡ್​ ಹ್ಯಾಂಡ್​ ಆಗಿ ಎಸಿಬಿ ಬಲೆಗೆ ಬಿದ್ದ ಲೆಡಿ ಆಫೀಸರ್​

By

Published : Jan 15, 2021, 6:32 PM IST

ರಾಮನಗರ:ಹಾರೋಹಳ್ಳಿಯಲ್ಲಿ ಕಾಮಗಾರಿಯೊಂದಕ್ಕೆ ಗುತ್ತಿಗೆದಾರರಿಂದ ಲಂಚ ಪಡೆಯುತ್ತಿದ್ದಾಗ ತೋಕಸಂದ್ರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ತೋಕಸಂದ್ರ ಗ್ರಾ.ಪಂಚಾಯಿತಿಯ ವ್ಯಾಪ್ತಿಯಲ್ಲಿ ಅಂದಾಜು 7 ಲಕ್ಷ ರೂ ವೆಚ್ಚದಲ್ಲಿ ಕೈಗೊಂಡಿದ್ದ ಚೆಕ್ ಡ್ಯಾಮ್ ಕಾಮಗಾರಿಗೆ ಶೇ.10ರಷ್ಟು ಕಮಿಷನ್ ನೀಡುವಂತೆ ಪಿಡಿಒ ರಮ್ಯಾ ಬೇಡಿಕೆ ಇಟ್ಟಿದ್ದಾರೆ ಎಂದು ಎಸಿಬಿ ಅಧಿಕಾರಿಗಳಿಗೆ ಗುತ್ತಿಗೆದಾರ ದೂರು ನೀಡಿದ್ದರು.

ದೂರಿನನ್ವಯ ಡಿವೈಎಸ್ಪಿ ಮಲ್ಲೆಶ್ ನೇತೃತ್ವದ 7 ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿದೆ. ಈ ವೇಳೆ ದೂರುದಾರ ಕಾಮಗಾರಿಗೆ ಸಂಬಂಧಪಟ್ಟಂತೆ 57,000 ಕಮಿಷನ್ ಹಣವನ್ನು ಪಡೆಯುತ್ತಿದ್ದಾಗ ರಮ್ಯಾ ಎಸಿಬಿ ಬಲೆಗೆ ಬಿದ್ದರು. ಅಧಿಕಾರಿಯನ್ನು ಬಂಧಿಸಿದ ಎಸಿಬಿ ತನಿಖೆ ಮುಂದುವರಿಸಿದೆ.

ABOUT THE AUTHOR

...view details