ಕರ್ನಾಟಕ

karnataka

ETV Bharat / state

ಬಾಳೆ ಬೆಲೆ ಕುಸಿತ: ರಾಮನಗರದಲ್ಲಿ ಬೆಳೆ ನಾಶಪಡಿಸಿದ ರೈತ

ಮಾರುಕಟ್ಟೆಯಲ್ಲಿ ಬಾಳೆ ಬೆಲೆ ಸಂಪೂರ್ಣ ಕುಸಿತ ಕಂಡಿದ್ದು ಇಲ್ಲಿನ ರೈತನೊಬ್ಬ ಏಲಕ್ಕಿ ಬಾಳೆ ಗಿಡಗಳನ್ನು ಟ್ರ್ಯಾಕ್ಟರ್ ಹರಿಸಿ ನಾಶಪಡಿಸಿದ್ದಾನೆ.

Ramanagar farmer destroyed Banana
ಸಂಕಷ್ಟದಲ್ಲಿ ಬಾಳೆ ಬೆಳೆಗಾರ

By

Published : Jun 13, 2021, 11:52 AM IST

ರಾಮನಗರ:ಕಷ್ಟಪಟ್ಟು ಬೆಳೆದ ಬೆಳೆಗೆನ್ಯಾಯಯುತ ಬೆಲೆ ಸಿಗದ ಹಿನ್ನೆಲೆಯಲ್ಲಿ ಕೃಷಿಕರು ರೈತರು ಸಂಕಷ್ಟದಲ್ಲಿದ್ದಾರೆ. ಏಲಕ್ಕಿ ಬೆಳೆದು ಬೆಲೆ ಕುಸಿತಗೊಂಡ ಕಾರಣ ಹತಾಶೆಗೊಂಡ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಚಿಕ್ಕೆಬೋರನದೊಡ್ಡಿ ಗ್ರಾಮದ ರೈತ ನಾಗರಾಜ್ ಬಾಳೆ ತೋಟವನ್ನು ನಾಶ ಮಾಡಿದ್ದಾರೆ.

ಸಂಕಷ್ಟದಲ್ಲಿ ಬಾಳೆ ಬೆಳೆಗಾರ

ಇವರು ಲಕ್ಷಾಂತರ ರೂ.‌ ಖರ್ಚು ಮಾಡಿ ಮೂರುವರೆ ಎಕರೆ ಪ್ರದೇಶದಲ್ಲಿ ಏಲಕ್ಕಿ ಬಾಳೆ ಗಿಡ ಬೆಳೆದಿದ್ದರು. ಫಸಲು ಕೂಡ ಚೆನ್ನಾಗಿ ಬಂದು ಕಟಾವು ಹಂತ ತಲುಪಿತ್ತು. ಆದರೆ ಮಾರುಕಟ್ಟೆಯಲ್ಲಿ ಧಾರಣೆ ಕುಸಿತ ಕಂಡಿದ್ದು ಬೇಸತ್ತ ರೈತ ಟ್ರ್ಯಾಕ್ಟರ್ ಮೂಲಕ ಸಂಪೂರ್ಣವಾಗಿ ನಾಶ ಮಾಡಿದ್ದಾರೆ.

ಈ ಬಗ್ಗೆ ಗ್ರಾಮಸ್ಥರೊಬ್ಬರು ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾರೆ. ಅನ್ನದಾತರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ. ಸರ್ಕಾರ ಈ ಕೂಡಲೇ ರೈತರ ಸಮಸ್ಯೆ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details