ರಾಮನಗರ:ಜಿಲ್ಲೆಯ ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನುಸಿಪೀಡೆ ರೋಗದಿಂದ ತೆಂಗಿನ ಮರಗಳ ಸುಳಿಗಳು ಒಣಗಿ ಹೋಗುತ್ತಿದ್ದು, ಬೃಹತ್ತಾಗಿ ಬೆಳೆದ ತೆಂಗಿನ ಮರಗಳು ಕಾಯಿ ಕಟ್ಟುತ್ತಿಲ್ಲ. ಇದು ಇಲ್ಲಿನ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿದೆ.
ಜಿಲ್ಲೆಯ ರೈತರ ಜೀವನಾಡಿಯಾದ ತೆಂಗು ಬೆಳೆ ಈ ಬಾರಿಯೂ ನುಸಿ ರೋಗಕ್ಕೆ ತುತ್ತಾಗಿದೆ. ಇಲ್ಲಿನ ಶೇ.40 ಕ್ಕೂ ಹೆಚ್ಚು ಕುಟುಂಬಗಳು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯುತ್ತಾರೆ. ಮೊದಮೊದಲು ತೆಂಗು ಬೆಳೆಯಿಂದ ಅಧಿಕ ಲಾಭ ಪಡೆಯುತ್ತಿದ್ದ ರೈತದೀಗ ಬಾರಿ ನಷ್ಟಕ್ಕೀಡಾಗುತ್ತಿದ್ದಾನೆ.
ತೆಂಗಿಗೆ ಕಾಣಿಸಿಕೊಳ್ಳುವ ನುಸಿ ಪೀಡೆ ರೋಗದಿಂದ ಅದರ ಸುಳಿ ಸಂಪೂರ್ಣವಾಗಿ ಒಣಗಲಾರಂಭಿಸಿದೆ. ಸುಮಾರು 50 ರಿಂದ 60 ಅಡಿ ಎತ್ತರವಾಗಿ ಬೆಳೆದ ತೆಂಗಿನ ಮರ ಕಾಯಿ ಇಲ್ಲದೇ ಸಂಪೂರ್ಣವಾಗಿ ಒಣಗುತ್ತಿದೆ.