ರಾಮನಗರ: ಪುನೀತ್ ರಾಜ್‍ಕುಮಾರ್ ನಿಧನದಿಂದ ಮನನೊಂದ ಯುವಕನೋರ್ವ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಎಲೆಕೇರಿಯಲ್ಲಿ ನಡೆದಿದೆ.
ರಾಮನಗರದಲ್ಲಿ ನೇಣಿಗೆ ಶರಣಾದ ಪುನೀತ್ ಅಭಿಮಾನಿ - ರಾಮನಗರ
ನಟ ಪುನೀತ್ ರಾಜ್‍ಕುಮಾರ್ ಸಾವನ್ನು ಅರಗಿಸಿಕೊಳ್ಳಲಾಗದ ರಾಮನಗರದ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವೆಂಕಟೇಶ್ ಹಾಗು ಪುನೀತ್ ರಾಜ್‍ಕುಮಾರ್
ವೆಂಕಟೇಶ್ (26) ನೇಣಿಗೆ ಶರಣಾದ ಯುವಕ. ಈತ ಪವರ್ ಸ್ಟಾರ್ ಅಪ್ಪಟ ಅಭಿಮಾನಿಯಾಗಿದ್ದ. ಅಪ್ಪು ನಟಿಸಿದ ಚಿತ್ರ ಎಂದರೆ ಸಾಕು ಮೊದಲ ದಿನವೇ ಚಿತ್ರ ಮಂದಿರಕ್ಕೆ ಹೋಗಿ ನೋಡುತ್ತಿದ್ದನಂತೆ. ಆದರೆ ಪುನೀತ್ ನಿಧನದಿಂದ ನೊಂದ ಈತ ಕಳೆದ ಮೂರು ದಿನಗಳಿಂದ ಊಟ ಬಿಟ್ಟಿದ್ದು, ಇಂದು ಎಲೆಕೇರಿಯ ಗ್ರಾಮದಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಕ್ಷೌರಿಕ ವೃತ್ತಿ ಮಾಡುತ್ತಿದ್ದ ವೆಂಕಟೇಶ್ ಅಪ್ಪು ಸಮಾಧಿ ನೋಡಲು ಹಠ ಹಿಡಿದಿದ್ದನಂತೆ. ಆದ್ರೆ ಸಮಾಧಿ ನೋಡದೆಯೇ ಸಾವಿಗೆ ಶರಣಾಗಿದ್ದಾನೆ. ಈ ಸಂಬಂಧ ಚನ್ನಪಟ್ಟಣ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.