ಕರ್ನಾಟಕ

karnataka

ಹಕ್ಕಿಜ್ವರದ ಬಗ್ಗೆ ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು: ಕುಕ್ಕುಟ ಮಂಡಳಿ ಅಧ್ಯಕ್ಷ

ಈಗಾಗಲೇ ಹಕ್ಕಿಜ್ವರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಭೆ ಮಾಡಲಾಗಿದೆ. ಕೇರಳ ಹಾಗೂ ಇತರೆ ರಾಜ್ಯಗಳಲ್ಲಿ ರೋಗ ಇರುವಿಕೆ ಬಗ್ಗೆ ದೃಢಪಟ್ಟಿರುವುದರಿಂದ ಜಿಲ್ಲೆಯಲ್ಲಿಯೂ ಸಹ ಎಲ್ಲಾ ಮುಂಜಾಗ್ರತಾ ಕ್ರಮಗಳು ಮತ್ತು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ.

By

Published : Jan 20, 2021, 8:31 PM IST

Published : Jan 20, 2021, 8:31 PM IST

Kukkuttu board chairman said
ಕುಕ್ಕುಟ ಮಂಡಳಿ ಅಧ್ಯಕ್ಷ ಡಿ.ಕೆ.ಕಾಂತರಾಜ್

ರಾಮನಗರ:ಜಿಲ್ಲೆಯಲ್ಲಿ ಯಾವುದೇ ಹಕ್ಕಿಜ್ವರ ಪ್ರಕರಣಗಳು ಬೆಳಕಿಗೆ ಬರದಿದ್ದರೂ ಕೋಳಿ ಬೆಲೆಯಲ್ಲಿ ಏರಿಳಿತ ಕಂಡಿದೆ. ಇದನ್ನೇ ನಂಬಿಕೊಂಡಿರುವ ಲಕ್ಷಾಂತರ ಕುಟುಂಬಗಳ ಸ್ಥಿತಿ ಅತಂತ್ರವಾಗಿದೆ.

ಕುಕ್ಕುಟ ಮಂಡಳಿ ಅಧ್ಯಕ್ಷ ಡಿ.ಕೆ.ಕಾಂತರಾಜ್

ರಾಮನಗರ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಹಕ್ಕಿಜ್ಚರ ಪ್ರಕರಣಗಳು ಕಂಡು ಬಂದಿರುವುದಿಲ್ಲ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಈಗಾಗಲೇ ರೋಗ ತಡೆಗಟ್ಟಲು ಜಿಲ್ಲಾಡಳಿತ ಸನ್ನದ್ಧವಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಶುಪಾಲನೆ ಇಲಾಖೆ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಕೈಗೊಂಡಿದ್ದಾರೆ.

ಓದಿ: ಮುಂಬೈ, ಮಧ್ಯಪ್ರದೇಶದ ಕೋಳಿ ಅಭಿವೃದ್ಧಿ ಸಂಸ್ಥೆಯಲ್ಲಿ ಹಕ್ಕಿ ಜ್ವರ ಭೀತಿ

ಈಗಾಗಲೇ ಹಕ್ಕಿಜ್ವರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಭೆ ಮಾಡಲಾಗಿದೆ. ಕೇರಳ ಹಾಗೂ ಇತರೆ ರಾಜ್ಯಗಳಲ್ಲಿ ರೋಗ ಇರುವಿಕೆ ಬಗ್ಗೆ ದೃಢಪಟ್ಟಿರುವುದರಿಂದ ಜಿಲ್ಲೆಯಲ್ಲಿಯೂ ಸಹ ಎಲ್ಲಾ ಮುಂಜಾಗ್ರತಾ ಕ್ರಮಗಳು ಮತ್ತು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮುಂಜಾಗ್ರತಾ ಕ್ರಮಗಳು ಏನೇನು?

ಜಿಲ್ಲೆಯ ವಿವಿಧ ಅರಣ್ಯ ಪ್ರದೇಶಗಳಲ್ಲಿ, ಕೆರೆ-ಕಟ್ಟೆ ಪ್ರದೇಶಗಳಲ್ಲಿ ಪಕ್ಷಿಗಳ ಅಸ್ವಾಭಾವಿಕ ವಲಸೆ ಅಥವಾ ಇತರೆ ಪಕ್ಷಿಗಳಲ್ಲಿ ಅಸ್ವಾಭಾವಿಕ ಸಾವು ಕಂಡು ಬಂದಲ್ಲಿ ಸಾರ್ವಜನಿಕರು ಕೂಡಲೇ ಅರಣ್ಯ ಇಲಾಖೆ ಅಥವಾ ಪಶುಪಾಲನೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ರೋಗ ನಿಯಂತ್ರಣಕ್ಕೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಕೋಳಿ ಫಾರಂ ಮಾಲೀಕರ ಸಹಕಾರದ ಅವಶ್ಯಕತೆ ಇದೆ.

ಯಾವುದೇ ಕೋಳಿ ಫಾರಂಗಳಲ್ಲಿ ಅಸಹಜ ಕೋಳಿಗಳ ಸಾವು ಸಂಭವಿಸಿದಲ್ಲಿ ಕೂಡಲೇ ಹತ್ತಿರದ ಪಶುವೈದ್ಯರಿಗೆ ತಿಳಿಸಲು ಮತ್ತು ಇಲಾಖೆಗೆ ರೋಗ ತನಿಖೆಗಾಗಿ ಮಾದರಿಗಳನ್ನು ಸಂಗ್ರಹಿಸಲು ಸಹಕರಿಸುವಂತೆ ತಿಳಿಸಿದ್ದಾರೆ. ಇದಲ್ಲದೆ ಹಕ್ಕಿಜ್ವರದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅಗತ್ಯ ಇಲಾಖೆಗಳ ಸಹಕಾರದೊಂದಿಗೆ ಕೈಗೊಳ್ಳಲಾಗಿದ್ದು, ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಸೇವಿಸುವುದರಿಂದ ಯಾವುದೇ ರೀತಿಯ ಹಕ್ಕಿಜ್ವರ ರೋಗ ಹರಡುವುದಿಲ್ಲ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ರಾಜ್ಯ ಕುಕ್ಕುಟ ಮಂಡಳಿ ಅಧ್ಯಕ್ಷ ಡಿ.ಕೆ.ಕಾಂತರಾಜ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಕೋಳಿ ಫಾರಂ ನಂಬಿಕೊಂಡು ಜೀವನ:

ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಕೋಳಿ ಫಾರಂಗಳು ಇವೆ. ಹಕ್ಕಿಜ್ವರ ಸುದ್ದಿ ಹರಡುತ್ತಿದಂತೆ ಕೋಳಿ ಬೆಲೆಯಲ್ಲಿ ಏರಿಳಿತ ಉಂಟಾಗಲಿದೆ. ಇದರಿಂದ ಇದನ್ನೇ ನಂಬಿಕೊಂಡು ಬಂದ ಸಾವಿರಾರು ಕುಟುಂಬಗಳು ಬೀದಿಗೆ ಬರುತ್ತಿವೆ. ಇದಲ್ಲದೆ ನಮ್ಮಲ್ಲಿ ಕೋಳಿ ಮಾಂಸವನ್ನು 90 ಡಿಗ್ರಿಯಲ್ಲಿ ಚೆನ್ನಾಗಿ ಬೇಯಿಸಿ ತಿನ್ನುವುದರಿಂದ ಯಾವುದೇ ವೈರಸ್​​ಗಳು ಇರಲು ಸಾಧ್ಯವಿಲ್ಲ. ಇದಲ್ಲದೆ ರಾಜ್ಯದಲ್ಲಿ ಇದುವರೆಗೂ ಒಂದೂ ಕೂಡ ಹಕ್ಕಿಜ್ವರ ಬಂದಿರುವ ಪ್ರಕರಣಗಳು ಬೆಳಕಿಗೆ ಬಂದಿಲ್ಲ‌ ಎನ್ನುತ್ತಾರೆ ಕುಕ್ಕುಟ ಮಂಡಳಿ ಅಧ್ಯಕ್ಷರು.

ದೂರು ಸಲ್ಲಿಸಲು ಕ್ರಮ:

ಇದಲ್ಲದೆ ಜಿಲ್ಲೆಗೆ ಸಂಪರ್ಕಿಸುವ ಇತರೆ ರಾಜ್ಯದ ಗಡಿ ಭಾಗಗಳಲ್ಲಿ ಹಕ್ಕಿಗಳ ಸಾಗಾಣಿಕೆಯ ಬಗ್ಗೆ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ನಿಗಾ ವಹಿಸಬೇಕು. ಹಕ್ಕಿಜ್ವರದಿಂದ ಕೋಳಿಗಳ ಸಾವು ಸಂಭವಿಸಿದಾಗ ಜೀವಂತ ಕೋಳಿಗಳನ್ನು ಕಡಿಮೆ ಬೆಲೆಯಲ್ಲಿ ಗಡಿ ಭಾಗಗಳಲ್ಲಿ ಅಪರಿಚಿತರು ಮಾರಾಟ ಮಾಡುವ ಸಂಭವವಿರುತ್ತದೆ. ಅತಿ ಕಡಿಮೆ ಬೆಲೆಯಲ್ಲಿ ಕೋಳಿ ಮಾಂಸ ಮಾರಾಟ ಮಾಡುವುದು ಕಂಡು ಬಂದಲ್ಲಿ ತಕ್ಷಣ ಪಶುಸಂಗೋಪನಾ ಇಲಾಖೆಗೆ ದೂರು ಸಲ್ಲಿಸಿ ಸಹಕರಿಸುವಂತೆ ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಆರ್​​ಆರ್​​ಟಿ ತಂಡ ರಚನೆ:

ಹಾಗೆಯೇ ಜಿಲ್ಲೆಯಲ್ಲಿ ಹಕ್ಕಿಜ್ವರ ಕಂಡುಬಂದಲ್ಲಿ ತಕ್ಷಣ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲು ಜಿಲ್ಲೆಯಲ್ಲಿ 24 ಆರ್​​ಆರ್​​ಟಿ ತಂಡಗಳ ರಚನೆ ಮಾಡಲಾಗಿದ್ದು, ಪ್ರತಿ ತಂಡದಲ್ಲಿ ಒಬ್ಬ ಪಶುವೈದ್ಯಾಧಿಕಾರಿ, ಇಬ್ಬರು ಪಶುವೈದ್ಯಕೀಯ ಸಿಬ್ಬಂದಿ ಹಾಗೂ ಇಬ್ಬರು ಡಿ ದರ್ಜೆ ಸಿಬ್ಬಂದಿ ಸೇರಿ 04-05 ಜನ ಇರಲಿದ್ದಾರೆ. ಹಕ್ಕಿಜ್ವರ ಹರಡದಂತೆ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ABOUT THE AUTHOR

...view details