ರಾಮನಗರ: ಮೇಕೆದಾಟು ಯೋಜನೆ ವಿರೋಧಿಸಿ ಇಂದು ಮೇಕೆದಾಟು ಅರಣ್ಯ ಪ್ರದೇಶದಲ್ಲಿ ತಮಿಳುನಾಡಿನ ಕೆಲವರು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ತಮಿಳುನಾಡಿನ ಕಾವೇರಿ ರೈತರ ಹಿತ ರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಾಂಡಿಯನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದರು. ಆದರೆ, ತಮಿಳುನಾಡಿನ ತಂಜಾವೂರಿನಲ್ಲಿ ತಮಿಳುನಾಡು ಪೊಲೀಸರೇ ಅವರನ್ನು ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೋಡಿಹಳ್ಳಿ ಹಾಗೂ ಸಾತನೂರು ಭಾಗದ ಪೊಲೀಸರನ್ನು ಮೇಕೆದಾಟು ಅರಣ್ಯ ಪ್ರದೇಶದಲ್ಲಿ ನಿಯೋಜನೆ ಮಾಡಲಾಗಿದೆ.
ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ರೈತರ ಪ್ರತಿಭಟನೆ.. ರಾಮನಗರದಲ್ಲಿ ಬಿಗಿ ಭದ್ರತೆ - ಮೇಕೆದಾಟು ಯೋಜನೆ ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದ್ದ ತಮಿಳುನಾಡಿನ ಕಾವೇರಿ ರೈತರ ಹಿತ ರಕ್ಷಣಾ ಸಮಿತಿ
ಮೇಕೆದಾಟು ಯೋಜನೆ ವಿರೋಧಿಸಿ ಇಂದು ಮೇಕೆದಾಟು ಅರಣ್ಯ ಪ್ರದೇಶದಲ್ಲಿ ತಮಿಳುನಾಡಿನ ಕೆಲವರು ಪ್ರತಿಭಟನೆ ನಡೆಸಲು ಮುಂದಾಗಿದ್ದ ಹಿನ್ನೆಲೆ ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೋಡಿಹಳ್ಳಿ ಹಾಗೂ ಸಾತನೂರು ಭಾಗದ ಪೊಲೀಸರನ್ನು ಮೇಕೆದಾಟು ಅರಣ್ಯ ಪ್ರದೇಶದಲ್ಲಿ ನಿಯೋಜನೆ ಮಾಡಲಾಗಿದೆ.
ರಾಮನಗರದಲ್ಲಿ ಬಿಗಿ ಭದ್ರತೆ
ಪ್ರತಿ ವಾಹನವನ್ನು ತಪಾಸಣೆ ನಡೆಸಲಾಗುತ್ತಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ. ಪ್ರವಾಸಿಗರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಎಸ್ಪಿ ಎಸ್. ಗಿರೀಶ್ ತಿಳಿಸಿದ್ದಾರೆ.
ಕನಕಪುರ ವೃತ್ತದ ಕೋಡಿಹಳ್ಳಿ ಠಾಣೆ ವ್ಯಾಪ್ತಿಯ ಕೊಳಗೊಂಡ ಹಳ್ಳಿ, ಹುಣಸನಹಳ್ಳಿ, ಕಾಡು ಶಿವನಹಳ್ಳಿ, ಸಾತನೂರು ಪೊಲೀಸ್ ಠಾಣೆಯ ವ್ಯಾಪ್ತಿಯ ದೊಡ್ಡ ಹಾಲಳ್ಳಿ, ಬೆಂಡಗೋಡು, ಸಂಗಮ, ಮೇಕೆದಾಟು, ಹೊನಗಳ್ಳಿ ಪ್ರದೇಶಗಳಲ್ಲಿ ಸೂಕ್ತ ರೀತಿಯ ಬಂದೋಬಸ್ತ್ ಕಲ್ಪಿಸಲಾಗಿದೆ.